ಮಂಜೇಶ್ವರ : ತುಳುವೆರೆ ಅಯನೋ ಕೂಟ (ರಿ) ಇದರ ಅಂಗ ಸಂಸ್ಥೆಯಾದ ತುಳುನಾಡ ಬಾಲೆ ಬಂಗಾರ್ ಸಮಿತಿ ಮಂಜೇಶ್ವರ ಇದರ ಆರನೇ ವರ್ಷದ ದೀಪಾವಳಿ ಹಾಗೂ ಮಕ್ಕಳ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಮುದ್ದು ಮಕ್ಕಳ ಭಾವಚಿತ್ರ ಸ್ಪರ್ಧಾ ವಿಜೇತರ ಘೋಷಣೆ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮವು ಹೊಸಂಗಡಿಯ ಗೇಟ್ ವೇ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮವನ್ನು ಶ್ರೀ ರಾಜ ಬೆಳ್ಚಪಾಡ ಉದ್ಯಾವರ ಇವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸಂಕಬೈಲ್ ಮಂಜುನಾಥ ಅಡಪರವರು ವಹಿಸಿದರು. ವಿಜೇತ ಮುದ್ದು ಮಕ್ಕಳ ಭಾವಚಿತ್ರವನ್ನು ಉದ್ಯಮಿ ಶ್ರೀಮತಿ ಆಶಾ ಶೆಟ್ಟಿ ಅತ್ತಾವರ ಅನಾವರಣಗೊಳಿಸಿದರು. ಬಹುಮಾನಗಳ ಘೋಷಣೆಯನ್ನು ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಕೆ.ರವಿಂದ್ರ ಶೆಟ್ಟಿ ಉಳಿದೊಟ್ಟು ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಧಾರ್ಮಿಕ ಮುಂದಾಳು ಶ್ರೀ ವಿಜಯ ಪಂಡಿತ್ ಭಗವತೀ ಉಪ್ಪಳ, ಕರ್ನಾಟಕ ಜಾನಪದ ಪರಿಷತ್ ದಕ್ಷಿಣ ಕನ್ನಡದ ಅಧ್ಯಕ್ಷರಾದ ಶ್ರೀ ಪಮ್ಮಿ ಕೋಡಿಯಾಲ್ ಬೈಲ್, ಮಂಜೇಶ್ವರ ಬ್ಲೋಕ್ ಪಂಚಾಯತ್ ಸದಸ್ಯೆ ಶ್ರೀಮತಿ ಅಶ್ವಿನಿ ಎಂ ಎಲ್ ಪಜ್ವ, ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತಿ ಸುಳ್ಯಮೆ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಮಂಜೇಶ್ವರದ ಅಧ್ಯಕ್ಷರಾದ ಶ್ರೀ ಪದ್ಮನಾಭ ಕಡಪ್ಪರ, ಧಾರ್ಮಿಕ ಮುಂದಾಳು ಶ್ರೀ ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ, ಧಾರ್ಮಿಕ ಮುಂದಾಳು, ನ್ಯಾಯವಾದಿ ಶ್ರೀ ನವೀನ್ ರಾಜ್ ಕೆ.ಜೆ, ಧಾರ್ಮಿಕ ಮುಂದಾಳು ಶ್ರೀ ಸುರೇಶ್ ಶೆಟ್ಟಿ ಪರಂಕಿಲ, ಸಾಂಸ್ಕೃತಿಕ ಸಂಘಟಕರಾದ ಶ್ರೀ ಉದಯ ಕುಮಾರ್ ಶೆಟ್ಟಿ ಕರಿಬೈಲು, ಧಾರ್ಮಿಕ, ಸಾಂಸ್ಕೃತಿಕ ಸಂಘಟಕರಾದ ಶ್ರೀ ಕಾರ್ತಿಕ್ ಶೆಟ್ಟಿ ಮಜಿಬೈಲು, ಅಬ್ಬಕ್ಕ ಟಿವಿಯ ಮಾಲಕರಾದ ಶ್ರೀ ಶಶಿಧರ ಪೊಯ್ಯತ್ತಬೈಲ್, ಟೀಮ್ ಮಂಜುಶ್ರೀ ತುಳುನಾಡ್ ಸಂಸ್ಥೆಯ ಸಂಸ್ಥಾಪಕರು, ರಾಜ್ಯಧ್ಯಕ್ಷರು ಶ್ರೀ ಮನೋಜ್ ಕುಲಾಲ್ ಕೊಡಕ್ಕಲ್, ಫ್ಲೆಕ್ಸ್ ಪಾಯಿಂಟ್ ಹೊಸಂಗಡಿ ಇದರ ಮಾಲೀಕರಾದ ಮೊಹಮ್ಮದ್ ರಫೀಕ್, ಶ್ರೀ ಕೇಶವ ಕನಿಲ, ಶ್ರೀ ಜಗದೀಶ್ ಮಡಿವಾಳ, ಶ್ರೀ ನಿತ್ಯಾನಂದ ಕುಲಾಲ್ ಬೇಕೂರು, ಶ್ರೀ ಬಾಬು ಮಾಸ್ಟರ್, ಜೆ.ಪಿ ಕೋಟೆಕ್ಕಾರ್, ಶ್ರೀ ಪ್ರಜ್ವಲ್ ಚಂದ್ರಹಾಸ ಆಚಾರ್ಯ ಕೋಟೆಕ್ಕಾರ್ರವರು ಉಪಸ್ಥಿತರಿದ್ದರು. ತುಳುನಾಡ ಬಾಲೆ ಬಂಗಾರ್ ಅಧ್ಯಕ್ಷರಾದ ಶ್ರೀ ರತನ್ ಕುಮಾರ್ ಹೊಸಂಗಡಿ ಸ್ವಾಗತಿಸಿ, ಶ್ರೀ ವಿಜಯ ಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ) ವಂದಿಸಿದರು. ತುಳುನಾಡ ಬಾಲೆ ಬಂಗಾರ್ ಸಮಿತಿಯ ಪ್ರಧಾನ ಸಂಚಾಲಕರಾದ ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು.ಟೀಮ್ ಮಂಜುಶ್ರೀ ತುಳುನಾಡ್ ಸಂಸ್ಥೆಯ ಪದಾಧಿಕಾರಿಗಳು ಸಹಕರ ನೀಡಿದರು. ಸಭಾ ಕಾರ್ಯಕ್ರಮದ ಮುಂಚಿತವಾಗಿ ಇಂಚರ ಮೆಲೋಡಿಸ್ ಕಡಂಬರ್ ಇವರಿಂದ ತುಳು ಸಂಗೀತ ರಸಮಂಜರಿ ನೆರೆದವರನ್ನು ರಂಜಿಸಿತು.
ವರದಿ : ವಂಶಿ ಪಂಡಿತ್ ಕಣ್ಣೂರು, ಸಚಿನ್ ಜಿ ಮಣೇಲ್ ಬೈಲ್
ಚಿತ್ರಗಳು : ದೀಪಕ್ ರಾಜ್ ಉಪ್ಪಳ, ಜಯಂತ್ ಬಂದ್ಯೋಡ್

