ಮಂಜೇಶ್ವರ : ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಅಕ್ಷರ ಸಂತ ಶ್ರೀ ಹರೇಕಳ ಹಾಜಬ್ಬ ಅವರಿಗೆ ಸಂಸ್ಕಾರ ಸಾಹಿತಿ ಮಂಜೇಶ್ವರ ಅಸೆಂಬ್ಲಿ ಸಮಿತಿ ವತಿಯಿಂದ ಗೌರವಾಭಿನಂದನೆ ಹಾಗೂ ಯೂನಿವರ್ಸಲ್ ಸ್ವರ್ಣ ಪದಕ ಪ್ರದಾನ ಕಾರ್ಯಕ್ರಮ ಹೊಸಂಗಡಿ ವ್ಯಾಪಾರ ಭವನದಲ್ಲಿ ಜರುಗಿತು. ಸಂಸ್ಕಾರ ಸಾಹಿತಿ ರಾಜ್ಯಾಧ್ಯಕ್ಷರೂ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಆರ್ಯಾಡನ್ ಶೌಕತ್ ಅವರು ಹರೇಕಳ ಹಾಜಬ್ಬ ರವರನ್ನು ಸನ್ಮಾನಿಸಿ ಗೌರವಿಸಿದರು. ಬಳಿಕ ಮಾತನಾಡಿದ ಅವರು ಹರೇಕಳ ಹಾಜಬ್ಬರ ಅವರು ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಕ್ರಾಂತಿಯನ್ನು ಮಾಡಿದ ಓರ್ವ ಸಂತರಾಗಿದ್ದಾರೆ ಶಿಕ್ಷಣವನ್ನು ಪಡೆಯದೇ ಹಾಜಬ್ಬರ ಅವರು ಇಡೀ ಗ್ರಾಮದಲ್ಲಿಯೇ ಶಿಕ್ಷಣ ಕ್ರಾಂತಿಯನ್ನು ಮಾಡಿದ ಮಹಾನ್ ವ್ಯಕ್ತಿಯಾಗಿದ್ದಾರೆ ಇಂತಹ ವ್ಯಕ್ತಿಗಳಿಗೆ ಪದ್ಮಶ್ರೀ ಪುರಸ್ಕೃತ ನಿಜಕ್ಕೂ ಸಾರ್ಥಕ ವಾಗಿದೆ ಎಂದು ಅವರು ಹೇಳಿದರು. ತನಗಾಗಿ ಏನನ್ನೂ ಬಯಸದೆ ಸಮಾಜದ ಒಳಿತಿಗಾಗಿ ತನ್ನ ಸರ್ವಸ್ವವನ್ನೇ ಮುಡಿಪಾಗಿಟ್ಟ ಹರೇಕಳ ಹಾಜಬ್ಬ ರವರು ನಮ್ಮ ನಡುವೆ ನಡೆದಾಡುವ ಓರ್ವ ಮಹಾನ್ ಸಂತರಾಗಿದ್ದಾರೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಸಂಸ್ಕಾರ ಸಾಹಿತಿ ಅಸೆಂಬ್ಲಿ ಸಮಿತಿ ಅಧ್ಯಕ್ಷ ಸಂಕಬೈಲು ಸತೀಶ ಅಡಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಿಸಿಸಿ ಮಾಜಿ ಅಧ್ಯಕ್ಷ ಹಕೀಂ ಕುನ್ನಿಲ್, ಡಿಸಿಸಿ ಪ್ರಧಾನ ಕಾರ್ಯದರ್ಶಿ ಧನ್ಯಾ ಸುರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೊಹಮ್ಮದ್ ಡಿಎಂಕೆ, ಲಕ್ಷ್ಮಣ ಪ್ರಭು, ಜಿಲ್ಲಾ ಪಂಚಾಯತು ಸದಸ್ಯೆ ಕಮಲಾಕ್ಷಿ ಕೆ. ಕುಂಬಳೆ, ಸಂಸ್ಕಾರ ಸಾಹಿತಿ ಜಿಲ್ಲಾ ನೇತಾರರಾದ ರಾಘವನ್ ಕುಳಂಗರೆ, ದಿನೇಶ್, ರಾಘವನ್ ಮಾಸ್ತರ್, ಯುನಿವರ್ಸಲ್ ಸಮೂಹ ಸಂಸ್ಥೆಯ ವಾಹಿದ್, ಸಮದ್, ಬಿ ಎಂ ಮನ್ಸೂರ್. ಸಂಘಟಕರಾದ ಕಲೀಲ್ ಬಜಾಲ್, ಅಜೀಜ್ ಕಲ್ಲೂರು, ಶರೀಫ್ ಅರಿಬೈಲ್, ವಿನೋದ್ ಪಾವೂರು ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಪದೋನ್ನತಿಗೊಂಡ ಆರ್ಯಾಡನ್ ಶೌಕತ್ ಅವರನ್ನು ಸಂಸ್ಕಾರ ಸಾಹಿತಿ ಮಂಜೇಶ್ವರ ಅಸೆಂಬ್ಲಿ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಂಸ್ಕಾರ ಸಾಹಿತಿ ಸಮಿತಿ ಪ್ರಧಾನ ಕಾರ್ಯದರ್ಶಿ ಆರಿಫ್ ಮಚ್ಚಂಪಾಡಿ ಸ್ವಾಗತಿಸಿ. ಕೋಶಾಧಿಕಾರಿ ಜಗದೀಶ್ ಮೂಡಂಬೈಲು ವಂದಿಸಿದರು. ಗಾಯಕ ಉಮರ್ ಮಂಜೇಶ್ವರರವರು ಹರೇಕ ಳ ಹಾಜಬ್ಬ ಕುರಿತ ಹಾಡನ್ನು ಸುಶ್ರಾವ್ಯವಾಗಿ ಹಾಡಿದರು.
ಚಿತ್ರಗಳು : ದೀಪಕ್ ರಾಜ್ ಉಪ್ಪಳ
