ಮಂಜೇಶ್ವರ:- ಕೇರಳ ಸರಕಾರ ನಾಡಿನ ಜನತೆಯನ್ನು ವಂಚಿಸುತ್ತಿದೆ, ಪೆಟ್ರೋಲ್ ದರ ದೇಶದಲ್ಲಿ ಕಡಿಮೆ ಆದಾಗ ಕೇರಳ ಮಾತ್ರ ಕಡಿಮೆ ಮಾಡದೆ ಜನತೆಯನ್ನು ವಂಚಿಸುತ್ತಿದೆ ಇದು ಪಿಣರಾಯಿ ಸರಕಾರ ಮಾಡುತ್ತಿರುವ ವಂಚನೆಯ ಪ್ರತೀಕ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರವೀಶ್ ತಂತ್ರಿ ಕುಂಟಾರು ಹೇಳಿದರು. ಕೇರಳ ಸರಕಾರದಿಂದ ಪೆಟ್ರೋಲಿಯಂ ಬೆಲೆ ಇಳಿಸುವಂತೆ ಆಗ್ರಹಿಸಿ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಮಜೀರ್ಪಳ್ಳದಲ್ಲಿ ಇಂದು ಸಂಜೆ ನಡೆದ ಪ್ರತಿಭಟನಾ ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೊಲೆ ಆರೋಪಿಗಳನ್ನು ಸಂರಕ್ಷಿಸಲು ಬೇಕಾಗಿ ಪಿಣರಾಯಿ ಸರಕಾರ ಪೆಟ್ರೋಲ್ ದರ ಕಡಿಮೆ ಮಾಡುತ್ತಿಲ್ಲ. ಪೆಟ್ರೋಲ್ ನಲ್ಲಿ ಬರುವ ಲಾಭ ಆರೋಪಿಗಳ ಪರ ವಾದಿಸುವ ವಕೀಲರಿಗೆ ನೀಡಲಾಗುತ್ತಿದೆ. ಎಂದವರು ಆಕ್ರೋಶ ವ್ಯಕ್ತಪಡಿಸಿದರು. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಕಡಿಮೆ ಮಾಡದಿದ್ದಲ್ಲಿ ಮುಂದೆ ಇಡೀ ರಾಜ್ಯದಲ್ಲಿ ಪ್ರತಿಭಟಿಸಲು ಸನ್ನದ್ದರಾಗಿದ್ದೇವೆ ಎಂದು ಅವರು ಹೇಳಿದರು.
ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಅಧ್ಯಕ್ಷರಾದ ಆದರ್ಶ್ ಬಿ.ಎಂ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ಪಿಣರಾಯಿ ಸರಕಾರ ವಂಚನೆಯ ಪ್ರತೀಕ 100 ರೂಪಾಯಿ ಪೆಟ್ರೋಲಿಯಂ ಉತ್ಪನಕ್ಕೆ 45 ರೂಪಾಯಿ ರಾಜ್ಯ ಸರಕಾರದ ಖಾತೆಗೆ ಸಿಗುತ್ತಿದೆ ಅದರಲ್ಲಿ 5 ರೂ ಕಡಿಮೆ ಮಾಡದ ರಾಜ್ಯ ಸರಕಾರ ವಂಚಿಸುತ್ತಿರುವ ಪರಿ ಇದನ್ನು ಜನತೆ ತಿಳಿಯಬೇಕು ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ರೈ ಪರಂಕಿಲ, ಮಹಿಳಾ ಮೋರ್ಚಾ ರಾಷ್ಟ್ರೀಯ ಸಮಿತಿ ಸದಸ್ಯೆ ಶ್ರೀಮತಿ ಅಶ್ವಿನಿ ಎಂ.ಎಲ್ ಪಜ್ವ, ಮಹಿಳಾ ಮೋರ್ಚಾ ಮಂಜೇಶ್ವರ ಮಂಡಲ ಅಧ್ಯಕ್ಷೆ ಶ್ರೀಮತಿ ಮಮತಾ ಕಾಯರಡ್ಕ, ಬಿಜೆಪಿ ಮಂಜೇಶ್ವರ ಮಂಡಲ ಕಾರ್ಯದರ್ಶಿ ಸಂತೋಷ್ ದೈಗೋಳಿ, ಓಬಿಸಿ ಮೋರ್ಚಾ ಮಂಜೇಶ್ವರ ಮಂಡಲ ಅಧ್ಯಕ್ಷರಾದ ಚಂದ್ರಹಾಸ ಪೂಜಾರಿ ಕಡಂಬಾರ್ ಭಂಡಾರ ಮನೆ, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯರಾದ ಧೂಮಪ್ಪ ಶೆಟ್ಟಿ ತಾಮಾರು ಮೊದಲಾದವರು ಮಾತನಾಡಿದರು.
ಮಹಿಳಾ ಮೋರ್ಚಾ ವರ್ಕಾಡಿ ಪಂಚಾಯತ್ ಸಮಿತಿ ಅಧ್ಯಕ್ಷೆ ತುಳಸಿ ಕುಮಾರಿ ಸ್ವಾಗತಿಸಿ, ಯುವಮೋರ್ಚಾ ವರ್ಕಾಡಿ ಪಂಚಾಯತ್ ಸಮಿತಿ ಅಧ್ಯಕ್ಷ ರಕ್ಷಣ್ ಅಡೆಕಳಕಟ್ಟೆ ನಿರೂಪಿಸಿ, ವಂದಿಸಿದರು.
ವರದಿ ಮತ್ತು ಚಿತ್ರಗಳು : ರತನ್ ಕುಮಾರ್ ಹೊಸಂಗಡಿ
