ಈ ದೇವಸ್ಥಾನವು ಮಹಾಲಕ್ಷ್ಮಿ ದೇವತೆಗೆ ಮುಡುಪಾಗಿದೆ. ಭಾರತದಲ್ಲಿ ಐಶ್ವರ್ಯ ಮತ್ತು ಸಂಪತ್ತಿನ ಸಂಕೇತವಾಗಿ ಆರಾಧಿಸಲ್ಪಡುವ ಜನಪ್ರಿಯ ದೇವತೆ ಮಹಾಲಕ್ಷ್ಮಿಯಾಗಿದ್ದಾಳೆ.
ಇದೊಂದು ಪ್ರಾಚೀನ, ಪುರಾತನ ದೇವಾಲಯವಾಗಿದ್ದು ಕೊಲ್ಲಾಪುರ ನಗರದ ಹೃದಯ ಭಾಗದಲ್ಲೇ ಇದೆ. ಈ ದೇವಾಲಯದ ಬಗ್ಗೆ ಪುರಾಣದಲ್ಲೂ ಉಲ್ಲೇಖವಿದ್ದು, 108 ಶಕ್ತಿಪೀಠಗಳಲ್ಲಿ ಇದೂ ಕೂಡ ಒಂದಾಗಿದೆ.
ಪ್ರತಿ ವರ್ಷವು ಲಕ್ಷಾಂತರ ಭಕ್ತರು ಮಾತೆಯ ಆಶೀರ್ವಾದ ಪಡೆಯಲು ಆಗಮಿಸುತ್ತಿದ್ದು, ಅವರ ನಡುವೆ ಮಹಾಲಕ್ಷ್ಮಿ ದೇವತೆಯು ಅಂಬಾ ಬಾಯಿ ಎಂದೇ ಜನಪ್ರಿಯಳಾಗಿದ್ದಾಳೆ.
ಈ ಮಹಾಲಕ್ಷ್ಮಿ ದೇವಸ್ಥಾನದಿಂದಾಗಿಯೇ ಕೊಲ್ಲಾಪುರವು ಭಾರತದಲ್ಲಿಯ ಕೆಲವೆ ಕೆಲವು ಉಚ್ಛಮಟ್ಟದ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ.
ಈ ದೇವಾಲಯವು 7ನೇ ಶತಮಾನದ್ದಾಗಿದ್ದು ಚಾಲೂಕ್ಯ ವಂಶದ ಕರಣದೇವ ರಾಜನಿಂದ ನಿರ್ಮಿಸಲ್ಪಟ್ಟಿದೆ. ಇದರ ವಾಸ್ತುಶಿಲ್ಪವು ಹೇಮಂದಪತಿಯಿಂದ ಪ್ರೇರಿತಗೊಂಡಿದೆ.
ನಂತರ 8ನೇ ಶತಮಾನದಲ್ಲಿ ಯಾದವ ವಂಶಜರು ಈ ದೇವಾಲಯದ ಅಂದವನ್ನು ಮತ್ತಷ್ಟು ಹೆಚ್ಚಿಸಿದರೆನ್ನಲಾಗಿದೆ. ವಿಸ್ಮಯವೆಂದರೆ ಪ್ರತಿದಿನವೂ ಸೂರ್ಯನ ಕಿರಣಗಳು ದೇವಿಯ ಮುರ್ತಿಯನ್ನು ಸ್ಪರ್ಶಿಸಿ ಹೊಳೆಯುವ ಹಾಗೆ ಈ ದೇವಾಲಯದ ನಿರ್ಮಾಣವನ್ನು ಮಾಡಲಾಗಿದೆ.
ನವರಾತ್ರಿಯಂಥ ಹಬ್ಬಗಳಲ್ಲಿ ಸ್ಥಳೀಯರಲ್ಲದೇ ದೇಶದ ವಿವಿಧೆಡೆಯಿಂದ ಅಸಂಖ್ಯಾತ ಭಕ್ತರು ಕೊಲ್ಹಾಪುರಿಗೆ ಮುಗಿಬಿದ್ದು ಅಂಬಾ ದೇವಿಯ ದರ್ಶನ ಪಡೆಯಲು ಕಾತುರರಾಗಿರುತ್ತಾರೆ.
ಈ ಸಮಯದಲ್ಲಿ ದೇವಸ್ಥಾನವು ಎದ್ದು ಕಾಣುವ ಬಣ್ಣಗಳಿಂದ ಅಲಂಕೃತಗೊಂಡು, ಸಂಗೀತಮಯ ವಾತಾವರಣವನ್ನು ಹೊಂದಿರುತ್ತದೆ
ಲೇಖನ : ಶ್ರೀ ಬೆಂಗಳೂರು
