ಅಮರ ಶಿಲ್ಪಿ ಜಕ್ಕಣ್ಣಚಾರ್ಯರ ಕಲೆಗಾರಿಕೆಯು ವಿಶ್ವದಲ್ಲೇ ಪ್ರಸಿದ್ಧವಾದುದು. ಶತಮಾನದ ಹಿಂದಿನಿಂದ ಇಂದಿನ ವರೆಗೂ ಅವರ ಕಲೆಗೆ ಸರಿಸಾಟಿ ಇಲ್ಲ : ದಕ್ಷಿಣ ಕನ್ನಡ ಅಪರ ಜಿಲ್ಲಾಧಿಕಾರಿ ಶ್ರೀ ಚೆನ್ನಪ್ಪ
January 02, 2022
0
ಮಂಗಳೂರು:- ದಕ್ಷಿಣ ಕನ್ನಡ ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮತ್ತು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಸಹಯೋಗದಲ್ಲಿ ಶ್ರೀ ಅಮರ ಶಿಲ್ಪಿ ಜಕ್ಕಣ್ಣಚಾರ್ಯ ಜನ್ಮದಿನೊತ್ಸವವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಅಪರ ಜಿಲ್ಲಾಧಿಕಾರಿ ಶ್ರೀ ಚೆನ್ನಪ್ಪ ದೀಪ ಬೆಳಗಿಸಿ ಉದ್ಘಾಟಿಸಿದರು. ಅಮರ ಶಿಲ್ಪಿ ಜಕ್ಕಣ್ಣಚಾರ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು ಅಮರ ಶಿಲ್ಪಿ ಜಕ್ಕಣ್ಣಚಾರ್ಯರ ಕಲೆಗಾರಿಕೆಯು ವಿಶ್ವದಲ್ಲೇ ಪ್ರಸಿದ್ಧವಾದುದು. ಶತಮಾನದ ಹಿಂದಿನಿಂದ ಇಂದಿನ ವರೆಗೂ ಅವರ ಕಲೆಗೆ ಸರಿಸಾಟಿ ಇಲ್ಲ ಎಂದು ಹೇಳಿದರು. ಸಹ ಚಿಂತನ ಮಾಸ ಪತ್ರಿಕೆಯ ಪ್ರಕಾಶಕ ಎಸ್ .ವಿ .ಆಚಾರ್ ಮಾತನಾಡಿ ಅಮರ ಶಿಲ್ಪಿ ಜಕ್ಕಣ್ಣಾಚಾರ್ಯ ರ ಶಿಲ್ಪ ಕಲೆ ಜಗತ್ ಪ್ರಸಿದ್ಧವಾದುದು ಅವರ ಜನುಮ ದಿನಾಚರಣೆ ಮಾಡುವುದು ಅರ್ಥಪೂರ್ಣವಾದುದು ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ 2ನೇ ಮೊಕ್ತೇಸರ ಸುಂದರ ಆಚಾರ್ಯ ಬೆಳುವಾಯಿ ,3ನೇ ಮೊಕ್ತೇಸರ ಎ. ಲೋಕೇಶ್ ಆಚಾರ್ಯ ಬಿಜೈ, ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾದ ಟಿ. ಜಯಕರ್ ತಲೆಬೈಲ್, ಕೆ. ಕೆ. ವಿಠ್ಠಲ್ ಆಚಾರ್ಯ, ದಾಮೋದರ್ ಆಚಾರ್ಯ ಕಲ್ಪನೆ, ಟಿ. ದಿವಾಕರ್ ಆಚಾರ್ಯ ಕ್ಷೇತ್ರದ ಆಡಳಿತ ಮಂಡಳಿಯ ವಿಶೇಷ ಆಹ್ವಾನಿತ ಸುಜೀರ್ ವಿನೋದ್, ಜೀರ್ಣೋದ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮ. ವೆಂಕಟೇಶ್ ಆಚಾರ್, ನಿವೃತ್ತ ಪೊಲೀಸ್ ಅಧಿಕಾರಿ ಸುಂದರ ಆಚಾರ್ಯ ಮರೋಳಿ, ನಿವ್ರತ್ತ ಪ್ರೊಫೆಸರ್ ಯಶವಂತ ಆಚಾರ್ ಗುರುಪುರ, ಈ ಸಂದರ್ಭ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೇಶ್ ಜಿ. ಕಾರ್ಯಕ್ರಮ ನಿರೂಪಿಸಿದರು.
Tags
