ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವ | ಭಕ್ತಿಗೀತೆ ಬಿಡುಗಡೆ
January 10, 2022
0
ಮಂಗಳೂರು : ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ತುಳುನಾಡ ಗಾನಗಂಧರ್ವ ಸಂಗೀತ ಸೇವಾ ಪ್ರತಿಷ್ಠಾನ ರಿ. ಪುತ್ತೂರು ಜಗದೀಶ್ ಜಗದೀಶ್ ಅಚಾರ್ಯರವರು ಹಾಡಿದ "ಅಮ್ಮ ಕಾಳಿಕಾಂಬಾ ಎಮಗೆ ನೀಡುವ ದರುಶನವ " ಕನ್ನಡ ಭಕ್ತಿಗೀತೆ ವಿಡಿಯೋ ಆಲ್ಬಮ್ ಅನ್ನು ಕ್ಷೇತ್ರದ ಆಡಳಿತ ಮೊಕ್ತೇಸರರಾದ ಕೆ ಕೇಶವ ಆಚಾರ್ಯ ಲೋಕಾರ್ಪಣೆ ಮಾಡಿದರು. ಈ ಭಕ್ತಿಗೀತೆಯ ಸಾಹಿತ್ಯ ರಚನೆಮಾಡಿದ ತುಳುಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ಸರ್ ಮಾತನಾಡುತ್ತ ಪಂಚ ಕಸುಬು ಗಳಲ್ಲಿ ವಿಶ್ವಕರ್ಮ ಬಾಂಧವರ ಕೊಡುಗೆ ಅಪಾರವಾದುದು , ದೇವತಾ ಆರಾಧನೆಗೂ ದೈವಾರಾಧನೆಗೆಗೂ ಅವಿನಾಭಾವ ಸಂಬಂಧವಿದೆ. ವಿಶ್ವಕರ್ಮರಲ್ಲಿ ಅದು ರಕ್ತಗತವಾದುದು, ಗಾಯಕ ಜಗದೀಶ್ ಪುತ್ತೂರು ಅವರ ಸಾಧನೆಗೆ ಸಹಕರಿಸಿದ ಕ್ಷೇತ್ರದ ಆಡಳಿತ ವರ್ಗವನ್ನು ಪ್ರಶಂಸಿಸಿದರು. ಶ್ರೀ ಕ್ಷೇತ್ರದ ಎರಡನೇ ಮೊಕ್ತೇಸರ ಸುಂದರ ಆಚಾರ್ಯ, ಮೂರನೇ ಮೊಕ್ತೇಸರ ಎ ಲೋಕೇಶ್ ಆಚಾರ್ಯ ಬಿಜೈ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರು ಶ್ರೀ ಟಿ ದಿನೇಶ್ ಶಕ್ತಿನಗರ, ಧ್ವನಿ ಸುರುಳಿ ನಿರ್ಮಾಣ ಮಾಡಿದ ರಾಜೇಶ್ ಅಚಾರ್ಯ ಪಂಜಿಕಲ್ ಪಟ್ರಾಡಿ, ಸಹಕರಿಸಿದ ಅರುಣ್ ರೈ ಪುತ್ತೂರು, ಚರಣ್ ಅಚಾರ್ಯ ಮತ್ತು ಕ್ಷೇತ್ರದ ಆಡಳಿತ ಮಂಡಳಿ, ಜೀರ್ಣೋದ್ದಾರ, ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಕ್ಷೇತ್ರದ ಆಡಳಿತ ಮಂಡಳಿಯ ವಿಶೇಷ ಆಹ್ವಾನಿತ ಸುಜೀರ್ ವಿನೋದ್ ರವರು ಮಾಡಿದರು.
Tags
