ಪತ್ರಕರ್ತ, ಸಂಘಟಕ, ಧಾರ್ಮಿಕ, ಸಾಮಾಜಿಕ ಸಾಂಸ್ಕೃತಿಕ, ರಂಗದಲ್ಲಿ ಸಕ್ರೀಯವಾಗಿ ಸೇವೆ ಸಲ್ಲಿಸುತ್ತಿರುವ "ರತನ್ ಕುಮಾರ್ ಹೊಸಂಗಡಿ"ಯವರಿಗೆ "ಕರ್ನಾಟಕ ಯುವ ರತ್ನ ಪ್ರಶಸ್ತಿ" ಪುರಸ್ಕಾರ
January 25, 2022
0
ಕಾರ್ಕಳ: ಕುರ್ಪಾಡಿ ಅಜೆಕಾರ್ ನಲ್ಲಿರುವ ಪುರಾತನ ಶ್ರೀ ಬೊಬ್ಬರ್ಯ ಸ್ಥಾನದ ಆದಿ ಗ್ರಾಮೋತ್ಸವ ಕಾರ್ಯಕ್ರಮ ಜರಗಿತು. ಈ ಸಂದರ್ಭದಲ್ಲಿ ಪತ್ರಕರ್ತ, ಸಂಘಟಕ, ಧಾರ್ಮಿಕ, ಸಾಮಾಜಿಕ ಸಾಂಸ್ಕೃತಿಕ, ರಂಗದಲ್ಲಿ ಸಕ್ರೀಯವಾಗಿ ಸೇವೆ ಸಲ್ಲಿಸುತ್ತಿರುವ, ಮಂಜುಶ್ರೀ ವಾಣಿ ಮತ್ತು ಮಂಜುಶ್ರೀ ನ್ಯೂಸ್ನ ಸಹ ಸಂಪಾದಕರಾಗಿರುವ ಶ್ರೀ ರತನ್ ಕುಮಾರ್ ಹೊಸಂಗಡಿ ಇವರಿಗೆ ಕರ್ನಾಟಕ ಯುವ ರತ್ನ ಪ್ರಶಸ್ತಿ ನೀಡಿ ಇಂದು ರಾತ್ರಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಹರಿಕೃಷ್ಣ ಪುನರೂರು ಪ್ರಶಸ್ತಿ ಪ್ರಧಾನ ಮಾಡಿದರು. ಸಾಹಿತಿ, ಸಂಘಟಕರಾದ ಶ್ರೀ ಶೇಖರ ಅಜೆಕಾರ್ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.
