ಬೆಂಗಳೂರಿನ ಸರ್ಕಾರಿ ಮಾದರಿ ಶಾಲೆಗೆ ಆಹಾರ ಸಾಮಗ್ರಿ ನೀಡುವ ಮೂಲಕ ಸಂಕ್ರಾಂತಿ ಹಬ್ಬ ಆಚರಿಸಿದ ಸಮಾನ ಮನಸ್ಕರು
January 14, 2022
0
ಬೆಂಗಳೂರು: ಸೂರ್ಯನು ಉತ್ತರಾಯಣದಿಂದ ದಕ್ಷಿಣಾಯಣಕ್ಕೆ ಚಲಿಸುವ ಪುಣ್ಯ ಕಾಲವೇ ಸಂಕ್ರಾಂತಿ ಈ ಹಬ್ಬವನ್ನು ವಿವಿಧೆಡೆ ಅತ್ಯಂತ ಪವಿತ್ರತೆಯಿಂದ ಕೊಂಡಾಡುವ ಸಂದರ್ಭದಲ್ಲಿ ಇಲ್ಲೊಂದು ಕಡೆ ಬೆಂಗಳೂರಿನ ಸಮಾನ ಮನಸ್ಕರಾದ ಗೆಳೆಯರು ಒಂದೆಡೆ ಕೂಡಿ ಸರ್ಕಾರಿ ಮಾದರಿ ಶಾಲೆಯೊಂದರಲ್ಲಿ ವೈವಿಧ್ಯಮಯವಾಗಿ ಆಚರಿಸಿಕೊಂಡು ಮಾದರಿಯಾಗಿದ್ದಾರೆ. ಬೆಂಗಳೂರಿನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟಕ್ಕೆ ಅಗತ್ಯ ತರಕಾರಿ ಇನ್ನಿತರ ಆಹಾರ ಸಾಮಗ್ರಿಗಳನ್ನು ನೀಡುವ ಮೂಲಕ ಹಬ್ಬದ ಸವಿಯನ್ನು ಮಕ್ಕಳ ಜೊತೆ ಸಂಭ್ರಮಿಸಿದರು. ವರ್ಷಂಪ್ರತಿ ತಮ್ಮ ಹುಟ್ಟುಹಬ್ಬ ಇನ್ನಿತರ ಶುಭ ಸಂದರ್ಭದಲ್ಲಿ ಆದರ್ಶಮಯವಾಗಿ ಆಚರಿಸುವ ಗೆಳೆಯರು ಈ ಬಾರಿ ಸಂಕ್ರಾಂತಿ ಹಬ್ಬವನ್ನು ವಿದ್ಯಾರ್ಥಿಗಳ ಜೊತೆಗೂಡಿ ಆಚರಿಸಲು ತೀರ್ಮಾನಿಸಿದ್ದರು. ಉದ್ಯೋಗಕ್ಕಾಗಿ ಬೆಂಗಳೂರಿನಲ್ಲಿ ನೆಲೆಸಿರುವ ಸುಕೇಶ್ ಬೆಜ್ಜ, ನಾಗೇಶ್ ಮಡ್ಯಾರ್ , ಗಣೇಶ್ ಪಾವೂರು, ಪ್ರೇಮ್ ರಾಜ್, ಶಶಿಕುಮಾರ್, ಆನಂದ ಬೆಂಗಳೂರು, ಆಶಾ ಬೆಂಗಳೂರು ಭಾಗವಹಿಸಿದ್ದರು.
