ಮಂಗಳೂರು: ಟೀಮ್ ಮಂಜುಶ್ರೀ ತುಳುನಾಡ್(ರಿ.) ಸಂಸ್ಥೆಯ ಸಾರಥ್ಯದಲ್ಲಿ ಮೂಡಿಬರುತ್ತಿರುವ ಡಿಜಿಟಲ್ ಮಾಧ್ಯಮ ಮಂಜುಶ್ರೀ ನ್ಯೂಸ್ ಎರಡು ವರ್ಷಗಳನ್ನು ಪೂರ್ತಿಗೊಳಿಸಿದೆ. ಈ ಸುಸಂದರ್ಭದಲ್ಲಿ ತನ್ನ ನೂತನ ಅಂತರ್ಜಾಲ ತಾಣವನ್ನು ಅನಾವರಣಗೊಳಿಸಿತು. ಕರ್ನಾಟಕ ಸರಕಾರದ ಮಾಜಿ ಸಚಿವರಾದ ಶ್ರೀ ರಮಾನಾಥ ರೈ ಮತ್ತು ಟೀಮ್ ಮಂಜುಶ್ರೀ ತುಳುನಾಡ್ (ರಿ.) ಸಂಸ್ಥೆಯ ಕಲಾಚಾವಡಿ ಘಟಕದ ಗೌರವ ಸಲಹೆಗಾರರು, ಹಿರಿಯ ರಂಗಭೂಮಿ, ಚಲನಚಿತ್ರ ಕಲಾವಿದರಾದ ಶ್ರೀ ಕೆ. ಮೋಹನ್ ಬೋಳಾರ್ರವರು ಜಾಲತಾಣವನ್ನು ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಗಾಯತ್ರಿ ಸುರೇಶ್ ಮಲ್ಲೂರು, ಸಂಸ್ಥೆಯ ಸಂಸ್ಥಾಪಕರು ರಾಜ್ಯಾಧ್ಯಕ್ಷರು ಮನೋಜ್ ಕುಲಾಲ್ ಕೊಡಕ್ಕಲ್, ಸಂಸ್ಥಾಪಕರು ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಶೆಟ್ಟಿ ಸೋಮೇಶ್ವರ, ಸಂಸ್ಥಾಪಕರು ರಾಜ್ಯ ಉಪಾಧ್ಯಕ್ಷರು ವಂಶಿ ಪಂಡಿತ್ ಕಣ್ಣೂರು, ಸಂಸ್ಥಾಪಕರು ರಾಜ್ಯ ಉಪಾಧ್ಯಕ್ಷರು ಚಂದ್ರೇಶ್ ಮಾನ್ಯ, ಸಂಸ್ಥಾಪಕರು ರಾಜ್ಯ ಕೋಶಾಧಿಕಾರಿ ಪುಷ್ಪರಾಜ್ ರಾವ್, ರಾಜ್ಯ ಸಮಿತಿ ಸಲಹೆಗಾರರು ಸುರೇಶ್ ಕುಲಾಲ್, ಕಲಾ ಚಾವಡಿ ಘಟಕದ ಸದಸ್ಯರಾದ ಅಶೋಕ್ ಬನ್ನೂರು, ಜೈದೀಪ್ ರೈ ಕೊರಂಗ, ಮನೋಜ್ ಭಂಡಾರಿ ಉರ್ವ, ಮೋಹನ್ ಉಚ್ಚಿಲ್, ಜಿತೇಂದ್ರ ಪಿಲಿಕ್ಕೂರು, ಮಹೇಂದ್ರ ಜೈನ್, ಕೇಶವ ದಾಸ್ ಆಚಾರ್ಯ, ರಮೇಶ್ ಕುಲಾಲ್, ಸುರಕ್ಷಾ, ಸುವೀಕ್ಷಾ, ಮುಂತಾದವರು ಉಪಸ್ಥಿತರಿದ್ದರು.
