ಮಂಜೇಶ್ವರ :-ಕಾಸರಗೋಡು ಜಿಲ್ಲೆಯಲ್ಲಿ ವಿವಿಧ ಜನಸೇವೆಯಲ್ಲಿ ,ಕ್ರೀಡಾಸೇವೆಯಲ್ಲಿ ಮುಂಚೂಣಿಯಲ್ಲಿದ್ದ ಲಕ್ಕಿ ಬ್ರದರ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಮಂಜೇಶ್ವರ ವಿಶ್ವಯೋಗ ದಿನದಂದು ಹಲವು ಸಂಘ,ಸಂಸ್ಥೆಯ ಪೈಪೋಟಿ ಮಾಡಿ, ಕಾಸರಗೋಡು ಜಿಲ್ಲೆಯಲ್ಲಿ ದ್ವಿತೀಯ ಸ್ಥಾನ ಪಡೆಯಿತು.
ಕಾಸರಗೋಡು ಕೋನ್ಫರೆನ್ಸ್ ಹಾಲ್ ನಲ್ಲಿ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕಾಸರಗೋಡು ಕಲೆಕ್ಟರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು,ಕಾಸರಗೋಡು ಎಂ.ಎಲ್ ಎ .ಎನ್ ಎ ನೆಲ್ಲಿಕುನ್ನು ಅವರು ಬಹುಮಾನ ವಿತರಿಸಿದರು.
ಕಲೆ ,ಕ್ರೀಡೆ,ಜೀವಕಾರುಣ್ಯ ,ಸಮಾಜಮುಖಿ ಸೇವೆಯಲ್ಲಿ ನಿರಂತರ 25ಪರ್ಷ ಸತತ ಜನಸೇವೆಯಲ್ಲಿ ಹಲವಾರು ಪ್ರಶಸ್ತಿ ಗೌರವಗಳು,ಪುರಸ್ಕಾರಗಳನ್ನು ತನ್ನದಾಗಿಸಿದ ಮಂಜೇಶ್ವರದ ಲಕ್ಕೀ ಬ್ರದರ್ಸ್ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಆಧುನಿಕ ಯುಗದ ಆರೋಗ್ಯಯುತ ಜೀವನ ಶೈಲಿ ಗೆ ಸೂಕ್ತವಾದ ಯೋಗ ದಿನದ ಈ ಬಹುಮಾನ ಅಭಿಮಾನದ ಸಂಕೇತವಾಗಿದೆ.ನಾಡಿನ ಸಮಸ್ತ ಜನರ ಕೈ ಹಿಡಿದು ಈ ಸಂಸ್ಥೆ ಈಗ ಎಲ್ಲರ ಗಮನ ಸೆಳೆದ ಏಕೈಕ ಸಂಸ್ಥೆಯಾಗಿ ಇನ್ನೂ ಸೇವಾ ಮನೋಭಾವವನ್ನು ಮುಂದುವರೆಸಿ ಜನಸೇವಾ ಆಸರೆಯಾಗಲಿ ಎಂಬುದು ಪ್ರಜೆಗಳ ಆಶಯ.
