ಮಂಜೇಶ್ವರ: ಕೇರಳ ರಾಜ್ಯ ಸರಕಾರದ ಆಡಳಿತದಲ್ಲಿ, ಪಿಣರಾಯಿ ವಿಜಯನ್ ಮುಖ್ಯಮಂತ್ರಿಯಾಗಿರುವ ಈ ಸಮಯದಲ್ಲಿ ಕೇರಳದಲ್ಲಿ ಮಹಿಳಾ ದೌರ್ಜನ್ಯ ಮಿತಿ ಮೀರುತ್ತಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಮಂಜೇಶ್ವರ ಮಂಡಲ ಸಮಿತಿ ಆರೋಪಿಸಿದೆ.
ಮಲಪುರಂನಲ್ಲಿ ಅಪ್ರಾಪ್ತೆ ಬಾಲಕಿಯನ್ನು ತಾಯಿಯ ಮುಂದೆ ಅತ್ಯಾಚಾರ ಮಾಡಿದ ಆರೋಪಿಯನ್ನು ಬಂಧಿಸದೇ ಆರೋಪಿಯ ಧರ್ಮ ನೋಡಿ ಆರೋಪಿಯನ್ನು ಕೇರಳ ಗೃಹ ಖಾತೆ ರಕ್ಷಿಸುತ್ತಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಆರೋಪಿಸಿದೆ. ರಾಜ್ಯ ಸರಕಾರದ ಮಹಿಳಾ ವಿರೋಧಿ ನೀತಿ ವಿರೋಧಿಸಿ ಬಿಜೆಪಿ ಮಹಿಳಾ ಮೋರ್ಚಾ ಹೊಸಂಗಡಿ ಪೇಟೆಯಲ್ಲಿ ಪ್ರತಿಭಟನಾ ಸಭೆ ನಡೆಸಿತು.
ಮಹಿಳಾ ಮೋರ್ಚಾ ಮಂಡಲ ಅಧ್ಯಕ್ಷೆ ಮಮತಾ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸಮಿತಿ ಸದಸ್ಯೆ ಅಶ್ವಿನಿ ಪಜ್ವ ಕಾರ್ಯಕ್ರಮ ಉದ್ಘಾಟಿಸಿದರು. ಮಂಡಲ ಬಿಜೆಪಿ ಅಧ್ಯಕ್ಷರಾದ ಆದರ್ಶ್ ಬಿಎಂ, ಹರಿಶ್ಚಂದ್ರ, ಮಹಿಳಾ ಮೋರ್ಚಾ ಪ್ರಮುಖರಾದ ಸರೋಜ ಬಳ್ಳಾಲ್, ಶಾಲಿನಿ ಶೆಟ್ಟಿ, ಸುಮಂಗಳ, ದಿಜ ಕುಮಾರಿ, ಶ್ವೇತಾ ಪವಳ, ಜಯಲಕ್ಷ್ಮಿ ಮುಂತಾದವರು ಉಪಸ್ಥಿತರಿದ್ದರು. ಅಶಲತಾ ಸ್ವಾಗತಿಸಿ, ವಂದಿಸಿದರು
