ಮಂಜೇಶ್ವರ:- ಮಿಯಪದವವು ಪಳ್ಳತ್ತಡ್ಕ ನಿವಾಸಿ ಆನಂದ (55) ಎಂಬವರು ಮಿಯಪದವು ನಿವಾಸಿ ವೆಂಕಟೇಶ್ ಎಂಬುವವರ ಹಿತ್ತಿಲಿನಲ್ಲಿ ಇಂದು ಅಪರಾಹ್ನ 12 ಗಂಟೆ ವೇಳೆಗೆ ತನ್ನ ಸಹಾಯಕನೊಂದಿಗೆ ಮರ ಕಡಿಯುವ ವೇಳೆ ಮರ ಮುರಿದು ಮೈಮೇಲೆ ಬಿದ್ದು, ಗಂಭೀರ ಗಾಯಗೊಂಡಿದ್ದರು. ಕೂಡಲೇ ಉಪ್ಪಳದ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ. ಮೃತದೇಹವನ್ನು ಇದೀಗ ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯ ಶವ ಮಹಜರಿನಲ್ಲಿರಿಸಲಾಗಿದೆ. ಮೃತರು ಸಿಪಿಎಂ ಮಿಯಪದವು ಸಮಿತಿ ಸದಸ್ಯರೆಂದು ತಿಳಿದು ಬಂದಿದೆ. ಮೃತರು ಪತ್ನಿ ಬೇಬಿ, ಸಹೋದರ ಸಹೋದರಿಯರಾದ ಬಾಬು, ಐತ್ತ, ಸುಂದರಿ ಹಾಗೂ ಅಪಾರ ಬಂಧು - ಬಳಗವನ್ನು ಅಗಲಿದ್ದಾರೆ. ಮೃತರ ಏಕ ಪುತ್ರ ಮುರಳಿ ಈ ಮೊದಲೇ ನಿಧನರಾಗಿದ್ದಾರೆ.
