ಮಂಜೇಶ್ವರ:- ಹಿಂದುತ್ವಕ್ಕಾಗಿ ಇತ್ತೀಚೆಗೆ ಅಗಲಿದ ಹಿಂದೂ ಸಹೋದರರಾಗಿರುವ ದಿ. ಜ್ಯೋತೀಶ್ ಕಾಸರಗೋಡು ಹಾಗೂ ದಿ. ಹರ್ಷ ಇವರಿಗೆ ಭಾರತೀಯ ಜನತಾ ಪಕ್ಷ, ಯುವಮೋರ್ಚಾ, ಮಹಿಳಾಮೋರ್ಚಾ ವರ್ಕಾಡಿ ಪಂಚಾಯತ್ ಸಮಿತಿ ವತಿಯಿಂದ ನಿನ್ನೆ ಸಂಜೆ ಮಜೀರ್ಪಲ್ಲ ಪೇಟೆಯಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು.
ಕಾರ್ಯಕ್ರಮದಲ್ಲಿ ಅಗಲಿದ ವೀರ ಸಹೋದರರಿಗೆ ಹಣತೆ ದೀಪ ಬೆಳಗಿ, ಮೌನ ಪ್ರಾರ್ಥನೆ ಸಲ್ಲಿಸಿ, ಪುಷ್ಪಾರ್ಚನೆ ನಡೆಸಿ, ಶ್ರದ್ಧಾಂಜಲಿ ಸಲ್ಲಿಸಿದರು.
ಬಿಜೆಪಿ ಮಹಿಳಾಮೋರ್ಚಾ ರಾಷ್ಟ್ರೀಯ ಸಮಿತಿ ಸದಸ್ಯೆ ಶ್ರೀಮತಿ ಅಶ್ವಿನಿ ಎಂ.ಎಲ್ ಪಜ್ವ ರವರು ಅಗಲಿದ ಸಹೋದರರಿಗೆ ನುಡಿ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಬಿಜೆಪಿ ವರ್ಕಾಡಿ ಪಂಚಾಯತ್ ಸಮಿತಿ ಅಧ್ಯಕ್ಷರಾದ ಆನಂದ ತಚ್ಚಿರೆ ಅಧ್ಯಕ್ಷತೆ ವಹಿಸಿದ್ದರು. ವರ್ಕಾಡಿ ಗ್ರಾಮ ಪಂಚಾಯತ್ ಸದಸ್ಯರಾದ ರಾಜ್ ಕುಮಾರ್ ಮುಟ್ಲ, ಶ್ರೀಮತಿ ಪದ್ಮಾವತಿ, ಶ್ರೀಮತಿ ಗೀತಾ ಭಾಸ್ಕರ್, ಶ್ರೀಮತಿ ಮಮತಾ ಕೋಣಿಬೈಲು, ಸೇರಿದಂತೆ ಹಿಂದೂ ಭಾಂದವರು ಉಪಸ್ಥಿತರಿದ್ದರು.
