ಬೋಳೂರು : ಭಾರತ ರತ್ನ, ಗಾನ ಕೋಗಿಲೆ, ಲತಾ ಮಂಗೇಶ್ಕರ್ ಇವರ ನಿಧನಕ್ಕೆ ಮಂಗಳೂರು ಸುಲ್ತಾನ್ ಬತ್ತೇರಿಯ ಬೋಳೂರು ಮೊಗವೀರ ಮಹಾಸಭಾ(ರಿ.) ವತಿಯಿಂದ ವಿಶೇಷ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸುಲ್ತಾನ್ ಬತ್ತೇರಿಯ ನದಿ ತಟದಲ್ಲಿ ಮರಳಿನಲ್ಲಿ ಲತಾ ಮಂಗೇಶ್ಕರ್ರವರ ಕಲಾಕೃತಿಯನ್ನು ರಚಿಸಿ ವಿಶೇಷ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬೋಳೂರು ಮೊಗವೀರ ಮಹಾಸಭಾದ ಅಧ್ಯಕ್ಷರು, ಗುರಿಕಾರರು, ಸಮಿತಿ ಸದಸ್ಯರು, ಬೋಳೂರು ಮೊಗವೀರ ಮಹಿಳಾ ಮಂಡಲದ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು. ಕಲಾಕೃತಿಯನ್ನು ಖ್ಯಾತ ಮರಳು ಚಿತ್ರಕಾರ ಹರೀಶ್ ಆಚಾರ್ಯ ಮತ್ತು ಪ್ರಸಾದ್ ಮೂಲ್ಯ ರವರ ಕೈಚಳಕದಲ್ಲಿ ಮೂಡಿಬಂದಿದೆ. ಇವರಿಗೆ ಸಹಾಯಕರಾಗಿ ರವಿ ಪೊಳಲಿ ಸಹಕಾರ ನೀಡಿದರು.
