ಕಾಸರಗೋಡು : ಕರಂದಕ್ಕಾಡು ಶ್ರೀ ವಿಶ್ವಕರ್ಮ ಭಜನಾ ಮಂದಿರದಲ್ಲಿ ಶ್ರೀ ವಿಶ್ವಕರ್ಮ ಭಜನಾ ಸಂಘದ 65ನೇ ಭಜನಾ ವಾರ್ಷಿಕೋತ್ಸವವು ತಂತ್ರಿವರ್ಯರಾದ ಬ್ರಹ್ಮಶ್ರೀ ಪುರೋಹಿತ ಮಾಯಿಪ್ಪಾಡಿ ಶ್ರೀ ಮಾಧವ ಆಚಾರ್ಯ ಇವರ ಆಜ್ಞೆಯಂತೆ ಅವರ ಪುತ್ರ ಪುರೋಹಿತ ಶ್ರೀ ಕೇಶವ ಆಚಾರ್ಯ ಹಾಗೂ ಪುರೋಹಿತ ಪರಕ್ಕಿಲ ಶ್ರೀ ಧರ್ಮೇಂದ್ರ ಆಚಾರ್ಯ ದುರ್ಗಿಪಳ್ಳ ಇವರ ನೇತೃತ್ವದಲ್ಲಿ ಬಹಳ ವಿಜೃಂಭಣೆಯಿಂದ ಜರಗಿತು. ಬೆಳಿಗ್ಗೆ 9ಗಂಟೆಗೆ ಗಣಹೋಮದೊಂದಿಗೆ ಪ್ರಾರಂಭಗೊಂಡು ಸಾಯಂಕಾಲ 5 ಗಂಟೆಗೆ ದೀಪ ಪ್ರತಿಷ್ಠೆ ಬಳಿಕ ಭಜನೆ ಪ್ರಾರಂಭಗೊಂಡು 8ಗಂಟೆಗೆ ಮಹಾಪೂಜೆ ಜರಗಿ ದೀಪವಿಸರ್ಜನೆ, ಪ್ರಸಾದ ವಿತರಣೆ ಹಾಗೂ ಲಘು ಉಪಹಾರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಭಜನೆಯಲ್ಲಿ ಹೆಸರಾಂತ ಕಲಾವಿದ ಭಜನೆ ಸಂಘಟಕರಾದ ಹರಿದಾಸ ಶ್ರೀ ಜಯಾನಂದ ಅದೇ ರೀತಿ ಮೇರು ವ್ಯಕ್ತಿತ್ವದ ಸರಳ ವ್ಯಕ್ತಿ ಭಜನೆಯನ್ನು ಜೀವನದಲ್ಲಿ ಅಳವಡಿಸಿದ ಭಜನೆ ಶ್ರೀ ಬಾಬಣ್ಣ ಅಡ್ಕತ್ತಬೈಲು ಹಾಗೂ ಭಜನೆಗೆ ಸಂಪೂರ್ಣ ಸಾತ್ ನೀಡಿದ ಭಜನಾ ಸಾಮ್ರಾಟ್ ಪುಳ್ಕೂರು ಶ್ರೀ ಮೋಹನ ಆಚಾರ್ಯ ಪುಳ್ಕೂರು ಶ್ರೀ ಮೇಘರಾಜ ಅಚಾರ್ಯ, ತಬಲಾದಲ್ಲಿ ಪುಳ್ಕೂರು ಗಗನ್ ರಾಜ ಆಚಾರ್ಯ ಮತ್ತು ಬಹಳ ಚಿಕ್ಕಂದಿನಿಂದಲೂ ಯಕ್ಷಗಾನ ಆಭ್ಯಾಸ ಮಾಡಿ ವಿವಿಧ ವೇದಿಕೆ ಹಂಚಿಕೊಂಡು ಪ್ರಶಂಸೆಗಳಿಸಿದ ತಬಲಾದಲ್ಲಿ ತನ್ನ ಕೈಚಳಕದಿಂದ ಪ್ರೆಕ್ಷಕರ ಗಮನಸೆಳೆದ ಮುವಾಜೆ ಶ್ರೀ ತಿರುಮಲೇಶ ಅಚಾರ್ಯ ಇವರ ಸುಪುತ್ರ ವಿದ್ಯಾರ್ಥಿ ಮಾಸ್ಟರ್ ಲತೇಶ್ ಅಚಾರ್ಯ ಇನ್ನೊಬ್ಬ ವಿದ್ಯಾರ್ಥಿ ಯುವ ಪ್ರತಿಭೆ ಶ್ರೇಷ್ಠ ಆನೆಬಾಗಿಲು ವಿವಿಧ ವ್ಯಕ್ತಿಗಳು ಹಾಗೂ ಮಹಿಳಾ ಸಂಘವು ಭಜನೆ ಸಂಕೀರ್ತನೆ ಹಾಡಿದರು.



