ಮಂಜೇಶ್ವರ: ಕೇರಳ ರಾಜ್ಯ ಸರಕಾರ ಕೆ .ರೈಲ್ ಹೆಸರಲ್ಲಿ ರಾಜ್ಯವನ್ನು ವಂಚನೆ ಮಾಡುತ್ತಿದೆ. ರಾಜ್ಯದಲ್ಲಿ ಸ್ತ್ರೀ ಯರಿಗೆ ಸುರಕ್ಷೆ ಇಲ್ಲವಾಗಿದೆ ಇದು ಸಹಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ಮಂಜೇಶ್ವರ ಸಭೆಯನ್ನು ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಇಂದು ಸಂಜೆ ಉದ್ಘಾಟಿಸಿ, ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಶ್ರೀ ರವೀಶ ತಂತ್ರಿ ಕುಂಟಾರ್ ಹೇಳಿದರು.
ಮಹಿಳಾ ಮೋರ್ಚಾ ರಾಷ್ಟ್ರೀಯ ಸಮಿತಿ ಸದಸ್ಯೆ ಅಶ್ವಿನಿ ಎಂ.ಎಲ್ ಪಜ್ವ, ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ.ಕೆ ಕಯ್ಯಾರ್, ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಪುಷ್ಪ ಗೋಪಾಲನ್, ಮೋರ್ಚಾ ಮಂಡಲ ಅಧ್ಯಕ್ಷರುಗಳಾದ ರಕ್ಷನ್ ಅಡಕಲಕಟ್ಟೆ, ಶ್ರೀಮತಿ ಮಮತಾ ಕುಲಾಲ್, ಸದಾಶಿವ ಚೇರಲ್, ಮುಖಂಡರಾದ ಚಂದ್ರಶೇಖರ್ ವರ್ಕಾಡಿ, ಮಣಿಕಂಠ ರೈ, ಪ್ರಸಾದ್ ರೈ, ಕೆ. ನಾರಾಯಣ್ ನಾಯ್ಕ್ ನಡುಹಿತ್ಲು, ಕುಳೂರು, ಶಂಕರ್ ನಾರಾಯಣ ಭಟ್, ಶ್ರೀಮತಿ ಆಶಲತಾ ಪೆಲಪ್ಪಾಡಿ, ಶ್ರೀಮತಿ ಪೂರ್ಣಿಮಾ ಜೋಡುಕಲ್ಲು, ಹಾಗೂ ಜನ ಪ್ರತಿನಿಧಿಗಳು ಉಪಸ್ಥಿತರಿದ್ದರು. ಪ್ರ.ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ಶ್ರೀಮತಿ ತುಳಸಿ ಕುಮಾರಿ ವರ್ಕಾಡಿ ವಂದಿಸಿದರು,
ಇದೆ ಸಂದರ್ಭದಲ್ಲಿ ಎಸ್. ಸಿ ಮೋರ್ಚಾ ನೇತಾರ, ಮಂಡಲ ಉಪಾಧ್ಯಕ್ಷ ದಿ. ಬಾಬು ಮಾಸ್ಟರ್ ಮಾಡ ಇವರಿಗೆ ಶ್ರದ್ದಂಜಲಿ ಸಲ್ಲಿಸಲಾಯಿತು.
