ಶ್ರೀ ಉಳ್ಳಾಲ್ತಿ ಶ್ರೀ ಕಾಳಿಚಾಮುಂಡಿ ದೈವಸ್ಥಾನ ಮೇರ್ಲ ಕಯ್ಯಾರು ಇದರ ವರ್ಷಾವಧಿ ನೇಮೋತ್ಸವವು 22.03.2022ನೇ ಮಂಗಳವಾರದಿಂದ 23.03.2022ನೇ ಬುಧವಾರದ ವರೆಗೆ ವಿವಿಧ ಧಾರ್ಮಿಕ, ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿರುವುದು. ಈ ಸಂದರ್ಭದಲ್ಲಿ ಶ್ರೀ ವಿಜಯ ಪಂಡಿತ್ ಭಗವತಿ ಉಪ್ಪಳ ಇವರ ನಿರ್ಮಾಣದ "ಸಿರಿಮುಡಿ" ಖ್ಯಾತಿಯ ಎ. ಸುರೇಶ್ ಕುಮಾರ್ ಮಂಗಲ್ಪಾಡಿ ಸಾಹಿತ್ಯದಲ್ಲಿ, ಶ್ರೀ ಪವನ್ ಕುಮಾರ್ ಹೊಸಂಗಡಿ ಹಾಡಿರುವ "ಮೇರ್ಲದ ಸತ್ಯದ ಮಣ್ಣ್" ಎಂಬ ಧ್ವನಿ ಸುರುಳಿಯು ಬಿಡುಗಡೆಗೊಳ್ಳಲಿದೆ. ಈ ಧ್ವನಿ ಸುರುಳಿ ನಿರ್ಮಾಣದಲ್ ಲಿಶ್ರೀನಿವಾಸ ಕರಿಬೈಲ್, ಮುರುಗೇಶ್ ಪಚ್ಲಂಪಾರೆ, ಮಂಜುನಾಥ ಪ್ರತಾಪ ನಗರ ಪೂರ್ಣ ಸಹಕಾರ ನೀಡಿದ್ದಾರೆ.
ವಿಜಯ್ ಪಂಡಿತ್ ಭಗವತಿ ಉಪ್ಪಳ ಎಲ್ಲದಕ್ಕೂ ಸೈ
ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸದಾ ದುಡಿಯುತ್ತಿರುವ ವಿಜಯ್ ಪಂಡಿತ್ ಇವರು ತನ್ನದೇ ಒಂದು ತಂಡವನ್ನು ಕಟ್ಟಿಕೊಂಡು ಅದೆಷ್ಟೋ ಅಶಕ್ತ ಕುಟುಂಬಗಳಿಗೆ ನೆರವಾದವರು. ಶ್ರೀ ಕ್ಷೇತ್ರದ ಹೆಸರಿನಲ್ಲಿ "ಶ್ರೀ ಕಾಳಿಚಾಮುಂಡಿ ಹೆಲ್ಪ್ ವಾಟ್ಸಪ್ ಗ್ರೂಪ್" ಎಂಬ ತಂಡವನ್ನು ರಚಿಸಿ ಶ್ರೀ ದೈವಸ್ಥಾನದ ಕುಟುಂಬಸ್ಥರ ಕಷ್ಟಕಾಲಕ್ಕೆ, ವಿದ್ಯಾಭ್ಯಾಸಕ್ಕೆ ನೆರವಾಗುವ ನಿಟ್ಟಿನಲ್ಲಿ ದುಡಿಯುತ್ತಿದ್ದಾರೆ. ಅಲ್ಲದೇ ರಾಜು ಬೆಳ್ಚಪ್ಪಾಡರ ಬಳಗ, ಜೈ ಶ್ರೀರಾಮ್ ವಾಟ್ಸಪ್ ಗ್ರೂಪ್ ಮಂಜೇಶ್ವರ ಮುಂತಾದ ಅನೇಕ ಸಂಘ ಸಂಸ್ಥೆಗಳೊಂದಿಗೆ ಸೇರಿಕೊಂಡು ಸೇವೆಯನ್ನು ಮಾಡುತ್ತಿದ್ದಾರೆ.
