ದುಬೈ: ದುಬೈ ಕೆ.ಎಂ.ಸಿ.ಸಿ ಮಂಜೇಶ್ವರ ಪಂಚಾಯತ್ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಮೂರು ವರುಷಕ್ಕೆ ಒಮ್ಮೆ ಸೇರಲಾಗುವ ಮಹಾ ಸಭೆಯು ಕೋವಿಡ್ ಮಹಾಮಾರಿ ಕಾರಣ ಎರಡು ವರ್ಷ ತಡವಾಗಿ ಸೇರಲಾಯಿತು. ದುಬೈ ಬಿಸಿನೆಸ್ ಬೇ ಸಮೀಪ ಬೇ ಬೈಟ್ಸ್ ಮಿನಿ ಸಭಾಂಗಣದಲ್ಲಿ ಸೇರಲಾದ ಸಭೆ ಮಂಜೇಶ್ವರ ಶಾಸಕರಾದ ಜನಾಬ್ ಎ.ಕೆ.ಎಂ. ಅಶ್ರಫ್ ಉದ್ಘಾಟಿಸಿದರು, ದುಬೈ ಕೆಎಂಸಿಸಿ ರಾಜ್ಯ ಕಾರ್ಯದರ್ಶಿ ನ್ಯಾಯವಾದಿ ಇಬ್ರಾಹಿಂ ಖಲೀಲ್ ಸಾಹಿಬ್ ಮುಖ್ಯ ಭಾಷಣ ಮಾಡಿದರು ಮಂಜೇಶ್ವರ ಪಂಚಾಯತ್ ಮುಸ್ಲಿಂ ಲೀಗ್ ಅಧ್ಯಕ್ಷ ಯು.ಕೆ. ಸೈಫುಲ್ಲಾ ತಂಗಳ್ ಮುಖ್ಯ ಅತಿಥಿಗಳಾಗಿದ್ದರು.ಅಧ್ಯಕ್ಷ ಸಲೀಂ ಸನಾ ಅವರ ಭಾಷಣದ ನಂತರ ಕಾರ್ಯದರ್ಶಿ ಅಶ್ಫಾಕ್ ಕರೋಡ ವರದಿ ಹಾಗೂ ಲೆಕ್ಕಾಚಾರ ವಾಚಿಸಿ ಸಭೆ ಅಂಗೀಕರಿಸಿತು. ದುಬೈ ಕೆ.ಎಂ.ಸಿ.ಸಿ ಮಂಡಲ ಕಾರ್ಯ ದರ್ಶಿಗಳಾದ ಆಸಿಫ್ ಹೊಸಂಗಡಿ, ಸುಬೈರ್ ಕುಬನೂರ್, ಸೈಫುದ್ದೀನ್ ಮೊಗ್ರಾಲ್ ಮತ್ತು ಸಲಹಾ ಸಮಿತಿ ಮೆಂಬರುಗಲಾದ ಮೊಯಿದಿನ್ ಬಾವ ಹೊಸಂಗಡಿ, ಸುಕುರ್ಚಾ ಉದ್ಯಾವರ ಮಾತನಾಡಿದರು. ನಂತರ ನೂತನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಅಬ್ದುಲ್ ರಹ್ಮಾನ್ ಬಾವ (ಅಧ್ಯಕ್ಷರು), ಫೈಸಲ್ ಕಡಂಬಾರ್ (ಪ್ರ :ಕಾರ್ಯದರ್ಶಿ), ಮುನೀರ್ ಪಾಂಡಿಯಾಲ್ (ಕೋಶಾಧಿಕಾರಿ), ಬಶೀರ್ ಅಹ್ಮದ್ ಉದ್ಯಾವರ (ಕಾರ್ಯಾಧ್ಯಕ್ಷ), ಸಲೀಂ ಪೊಸೋಟ್ (ಸಂಘಟನಾ ಕಾರ್ಯದರ್ಶಿ), ಸುಹೈಬ್ ತಂಗಲ್, ಸೈದು ಝಡ್, ಮೂಸಾ ಮೊನಾಕೊ, ಅಲ್ತಾಫ್ ಹೊಸಂಗಡಿ, ಮುಸ್ತಫಾ ಉದ್ಯಾವರ (ಉಪಾಧ್ಯಕ್ಷರುಗಳು), ಸತ್ತಾರ್ ಇಡಿಯಾ, ಯಾಕುಬ್ ಅರಿಮಲ, ಅದ್ದು ತಾಝ, ಮುಸ್ತಫಾ ಗೇರುಕಟ್ಟೆ, ನದೀಮ್ ಕಡಂಬಾರ್ (ಜಂಟಿ ಕಾರ್ಯದರ್ಶಿಗಳು), ಮುಹಮ್ಮದ್ ಕುಂಞಿ, ನಿಸಾರ್ ಅರಿಮಲ (ಕಲೆ ಮತ್ತು ಸಂಸ್ಕೃತಿ ಸಂಯೋಜಕ).ಮೈನಾಸ್, ಮುಸ್ತಫಾ ಹೊಸಂಗಡಿ, ಐ.ಎ ಖಲೀಲ್ ಮತ್ತು ಹನೀಫ್ ಕುಂಜತ್ತೂರು (ಕ್ರೀಡಾ ಸಂಯೋಜಕರು) ಸಭೆಯಲ್ಲಿ ಸಲೀಂ ಸನಾ ಅಧ್ಯಕ್ಷತೆ ವಹಿಸಿ ಅಸ್ಫಾಕ್ ಉದ್ಯಾವರ ಸ್ವಾಗತಿಸಿ ಫೈಸಲ್ ಕಡಂಬಾರ್ ವoದಿಸಿದರು.
