ಕುಕ್ಕಂಕೂಡ್ಲು : ಕುಕ್ಕಂಕೂಡ್ಲು ಶ್ರೀ ಕಂಠಪ್ಪಾಡಿ ಶ್ರೀ ಸುಬ್ರಹ್ಮಣ್ಯಸ್ವಾಮೀ ಕ್ಷೇತ್ರವು ಬಹುಪುರಾತನ, ಕಾರಣೀಕವು ಆಗಿದ್ದು ಪ್ರಕೃತ ಜೀರ್ಣೋದ್ಧಾರಗೊಂಡು ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಜರಗಿದ 48 ದಿನಗಳಲ್ಲಿ ಜರಗಲಿರುವ ದೃಡ ಕಲಶಾಭಿಷೇಕವು ನಾಳೆಯಿಂದ (ಮಾರ್ಚ್ 14 15 )ರಂದು ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ವೇದಮೂರ್ತಿ ದೇಲಂಪಾಡಿ ಶ್ರೀ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಜರಗಲಿರುವುದು.
ಸಾಯಂಕಾಲ 5.30ಕ್ಕೆ ಕ್ಷೇತ್ರಕ್ಕೆ ತಂತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತ, ವೈದಿಕ ಕಾರ್ಯಗಳು, ಪುಣ್ಯಾಹ ವಾಚನ, ಪ್ರಸಾದಶುದ್ದಿ, ರಾಕ್ಷೋಗ್ನಹೋಮ, ವಾಸ್ತುಹೋಮ, ವಾಸ್ತುಬಲಿ ಕಾರ್ಯಕ್ರಮ.ಸಾಯಂಕಾಲ 6.30ರಿಂದ ಶ್ರೀ ಉಬ್ರಂಗಳ ಗ್ರಾಮ ಭಜನಾ ಮಂಡಲಿಯವರಿಂದ ಭಜನೆ, ರಾತ್ರಿ 8ರಿಂದ ವಿದುಷಿ ಶ್ರೀಮತಿ ವಿದ್ಯಾಲಕ್ಷ್ಮೀ ನಾಟ್ಯ ವಿದ್ಯಾಲಯ ಕುಂಬಳೆ ಇವರ ಶಿಷ್ಯ ವೃಂದದವರಿಂದ ನೃತ್ಯ ಸಂಭ್ರಮ ಕಾರ್ಯಕ್ರಮ. ರಾತ್ರಿ 9 ಗಂಟೆಗೆ ಮಹಾಪೂಜೆ ಪ್ರಸಾದ ವಿತರಣೆ, ಪ್ರಸಾದ ಭೋಜನ. ದಿನಾಂಕ 15 ಮಂಗಳವಾರ
ಬೆಳಿಗ್ಗೆ 7ಕ್ಕೆ ಗಣಪತಿ ಹೋಮ, ಕಲಶಪೂಜೆ, ದೃಢಕಲಶಾಭಿಷೇಕ. 11 ಗಂಟೆಗೆ ಎಡನೀರು ಮಠ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಜಿಯವರ ಆಗಮನ ಪೂರ್ಣಕುಂಭ ಸ್ವಾಗತ, ಕ್ಷೇತ್ರದ ಮೊಕ್ತೇಸರರಾದ ಗೌರೀ ಶಂಕರ ರೈಗಳ ಅಧ್ಯಕ್ಷತೆಯಲ್ಲಿ
ಸಭಾಕಾರ್ಯಕ್ರಮ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಜಿಯವರಿಂದ ಆಶೀರ್ವಚನ, ಕ್ಷೇತ್ರ ತಂತ್ರಿಗಳಿಗೆ ಗೌರವಾರ್ಪಣೆ, ಅಪರಾಹ್ನ 12.15ಕ್ಕೆ ಮಹಾಪೂಜೆ,
ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವಕ್ಕೆ ಅವಿರತ ಶ್ರಮಿಸಿದ ಭಕ್ತಸಮೂಹದ ಶ್ರೇಯೋಭಿವೃದ್ಧಿಗೆ ತಂತ್ರಿಗಳಿಂದ ಸಾಮೂಹಿಕ ಪ್ರಾರ್ಥನೆ, ಪ್ರಸಾದ ವಿತರಣೆ, ಪ್ರಸಾದ ಭೋಜನ. ಸಾಯಂಕಾಲ 5ರಿಂದ ಶ್ರೀಧರ್ಮಶಾಸ್ತಾ ಸೇವಾ ಸಮಿತಿ ನೀರ್ಚಾಲು ಇವರಿಂದ ಭಜನಾ ಕಾರ್ಯಕ್ರಮ. ಸಾಯಂಕಾಲ 6ರಿಂದ ಯಕ್ಷವಿಹಾರಿ ಬದಿಯಡ್ಕ ಇವರಿಂದ ಗಾನವೈಭವ ಕಾರ್ಯಕ್ರಮ, ರಾತ್ರಿ 8.30ಕ್ಕೆ ದೀಪೋತ್ಸವ ವಿಶೇಷ ಕಾರ್ತಿಕ ಪೂಜೆ, ಪ್ರಸಾದ ವಿತರಣೆ ಜರಗಲಿದೆ.
