ಮಂಜೇಶ್ವರ : ಸಿಪಿಐ ಉದ್ಯಾವರ ಬ್ರಾಂಚ್ ಸಮ್ಮೇಳನವು ಕಾಮ್ರೆಡ್ ಟಿ.ವಿ ಥೋಮಸ್ ಕಟ್ಟಡದಲ್ಲಿ ನಡೆಯಿತು. ಬ್ರಾಂಚ್ ಸಹ ಕಾರ್ಯದರ್ಶಿ ಹರೀಶ್ ನಾಯಕ್ ಧ್ವಜಾರೋಹಣಗೈದರು. ರಮೇಶ್ ಉದ್ಯಾವರ ಅಧ್ಯಕ್ಷತೆ ವಹಿಸಿದರು. ಸಿಪಿಐ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಕಾಂ|| ಬಿ.ವಿ ರಾಜನ್ ಸಮ್ಮೇಳನವನ್ನು ಉದ್ಘಾಟಿಸಿದರು. ಸಿಪಿಐ ಮಂಜೇಶ್ವರ ಮಂಡಲ ಸಮಿತಿ ಸದಸ್ಯೆ ಚಿತ್ರಾವತಿ ಅಂಜರೆ, ಮೋಟಾರ್ ಯೂನಿಯನ್(ಎಐಟಿಯುಸಿ) ಕಾಸರಗೋಡು ಜಿಲ್ಲಾಧ್ಯಕ್ಷರಾದ ಮುಸ್ತಫಾ ಕಡಂಬಾರ್, ಸಿಪಿಐ ಮಂಜೇಶ್ವರ ಲೋಕಲ್ ಕಾರ್ಯದರ್ಶಿ ಶ್ರೀಧರ್ ಆರ್.ಕೆ ಮೊದಲಾದವರು ಮಾತನಾಡಿದರು. ಬ್ರಾಂಚ್ ಕಾರ್ಯದರ್ಶಿ ಶಾಂತಾರಾಮ್ ಬಾವುಟ ಮೂಲೆ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. ಧನ್ ರಾಜ್ ಹುತಾತ್ಮ ಠರಾವು, ಶನೀಶ್ ಸಂತಾಪ ಸೂಚಕ ಠರಾವು ಮಂಡಿಸಿದರು. ಉದ್ಯಾವರ ಬ್ರಾಂಚನ್ನು ಎರಡು ಬ್ರಾಂಚ್ಗಳನ್ನಾಗಿ ವಿಂಗಡಿಸಲಾಯಿತು. ಉದ್ಯಾವರ 1, ಉದ್ಯಾವರ 2. ಉದ್ಯಾವರ 1 ಬ್ರಾಂಚ್ ಕಾರ್ಯದರ್ಶಿಯಾಗಿ ಶಾಂತಾರಾಮ್ ಬಾವುಟ ಮೂಲೆ, ಸಹ ಕಾರ್ಯದರ್ಶಿಯಾಗಿ ಧನ್ ರಾಜ್ ಕೀರ್ತೇಶ್ವರ ಆಯ್ಕೆಯಾದರು. ಉದ್ಯಾವರ 2 ಬ್ರಾಂಚ್ ಕಾರ್ಯದರ್ಶಿಯಾಗಿ ರಮೇಶ್ ಉದ್ಯಾವರ ಹಾಗೂ ಸಹ ಕಾರ್ಯದರ್ಶಿಯಾಗಿ ಶನೀಶ್ ಆಯ್ಕೆಯಾದರು. ಮುರಳಿ ಗುತ್ತು ಸ್ವಾಗತಿಸಿ, ಮೊಹಮ್ಮದ್ ಗುಡ್ಡೆಕ್ಕೇರಿ ವಂದಿಸಿದರು.
