ಮಂಜೇಶ್ವರ: ಬಿಜೆಪಿ ಪಕ್ಷದಲ್ಲಿ 47 ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ ಕಾರ್ಯವೆಸಗುತ್ತಾ, ಮಂಜೇಶ್ವರದಲ್ಲಿ ಬಿಜೆಪಿ ಪಕ್ಷವನ್ನು ಬಲಗೊಳಿಸುವಲ್ಲಿ ಪ್ರಾಮಾಣಿಕವಾಗಿ ದುಡಿದ ಶ್ರಿ ಹರಿಶ್ಚಂದ್ರ ಮಂಜೇಶ್ವರ ರವರು ಇದೀಗ ಬಿಜೆಪಿ ಕೇರಳ ರಾಜ್ಯ ಪರಿಷತ್ ನ ಸದಸ್ಯರಾಗಿ ನಿಯುಕ್ತಿಗೊಂಡಿರುತ್ತಾರೆ. ಇವರಿಗೆ ಬಿಜೆಪಿ ಜಿಲ್ಲಾ ಸಮಿತಿ ವತಿಯಿಂದ ಅಭಿನಂದನೆ ಸಲ್ಲಿಸಿದೆ.
ಭಾರತೀಯ ಜನತಾ ಪಾರ್ಟಿಯ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಇಪ್ಪತ್ತೈದನೇ ಬೂತಿನ ಪ್ರಭಾರಿಯಾದ ಹರಿಶ್ಚಂದ್ರ ಮಂಜೇಶ್ವರವರು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿಯಲ್ಲಿ ಹಾಗೂ ಕಾಸರಗೋಡು ಜಿಲ್ಲಾ ಸಮಿತಿಯಲ್ಲಿ ಅನ್ಯಾನ್ಯ ಜವಾಬ್ದಾರಿಗಳನ್ನು ನಿಭಾಯಿಸಿ, ಮಂಜೇಶ್ವರ ಗ್ರಾಮ ಪಂಚಾಯತ್ ನಲ್ಲಿ ಉಪಾಧ್ಯಕ್ಷರಾಗಿಯೂ ಮಂಜೇಶ್ವರ ಬ್ಲಾಕ್ ಪಂಚಾಯತ್ ನ ಉಪಾಧ್ಯಕ್ಷರಾಗಿಯೂ ಸಮಾಜ ಸೇವೆ ಸಲ್ಲಿಸಿ ಪಕ್ಷವನ್ನು ತಳಮಟ್ಟದಲ್ಲಿ ಕಟ್ಟುವಲ್ಲಿ ಶ್ರಮವಹಿಸಿ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದವರಾಗಿದ್ದಾರೆ. ತಮ್ಮ ಅನುಪಮ ಸೇವೆಗೆ ಇದೀಗ ಬಿಜೆಪಿ ಕೇರಳ ರಾಜ್ಯ ಪರಿಷತ್ ಸಮಿತಿ ಸದಸ್ಯರಾಗಿ ನಿಯುಕ್ತಿಗೊಳಿಸಿ, ಘೊಷಿಶಿದೆ. ಬಿಜೆಪಿ ಕೇರಳ ರಾಜ್ಯ ಸಮಿತಿಯ ಅಧ್ಯಕ್ಷರಾದ ಕೆ. ಸುರೇಂದ್ರನ್ ರವರು ಹಾಗೂ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಕುಂಟಾರ್ ಶ್ರೀ ರವೀಶ ತಂತ್ರಿಯವರು ಅಭಿನಂದನೆಯನ್ನ ಸಲ್ಲಿಸಿದ್ದಾರೆ.

