ಕುಂಬಳೆ ಪೇಟೆಯಲ್ಲಿ ರಸ್ತೆ ಬದಿ ಮೀನು ಮಾರಾಟ | ಬಿಜೆಪಿ ಕುಂಬಳೆ ಪಂಚಾಯತ್ ಸಮಿತಿ ಆಶ್ರಯದಲ್ಲಿ ಪ್ರತಿಭಟನೆ
June 17, 2022
0
ಕುಂಬಳೆ : ಬಿಜೆಪಿ ಕುಂಬಳೆ ಪಂಚಾಯತ್ ಸಮಿತಿ ಆಶ್ರಯದಲ್ಲಿ ಕುಂಬಳೆ ಪೇಟೆಯಲ್ಲಿ ರಸ್ತೆ ಬದಿ ಮೀನು ಮಾರಾಟ ಮಾಡುವುದರ ಎದುರಾಗಿ ಕುಂಬಳೆ ಪಂಚಾಯತ್ ಕಚೇರಿಗೆ ಪ್ರತಿಭಟನಾ ಮೆರವಣಿಕೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂಬಳೆ ದಕ್ಷಿಣ ವಲಯ ಪಂಚಾಯತ್ ಬಿಜೆಪಿ ಅಧ್ಯಕ್ಷರಾದ ಸುಜಿತ್ ರೈ ವಹಿಸಿದರು, ಕಾರ್ಯಕ್ರಮವನ್ನು ಬಿಜೆಪಿ ರಾಜ್ಯ ಕೌನ್ಸಿಲ್ ಸದಸ್ಯರಾದ ಸ್ನೇಹಲತಾ ದಿವಾಕರ ಉದ್ಘಾಟಿಸಿದರು. ಜಿಲ್ಲಾ ಸಮಿತಿ ಸದಸ್ಯರಾದ ಮುರಳೀಧರ ಯಾದವ, ಮಾಜಿ ಜಿಲ್ಲಾಧ್ಯಕ್ಷರಾದ ರವೀಂದ್ರನ್ ಇವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಕುಂಬಳೆ ಮಂಡಲ ಪ್ರಧಾನ ಕಾರ್ಯದರ್ಶಿ ವಸಂತ್ ಮಯ್ಯ, ಕಾರ್ಯದರ್ಶಿ ಸುಧಾಕರ್ ಕಾಮತ್, ಮಂಡಲ ಉಪಾಧ್ಯಕ್ಷೆ ಪ್ರೇಮಲತಾ ಎಸ್, ಕುಂಬಳೆ ಪಂಚಾಯತ್ ಉತ್ತರ ವಲಯ ಅಧ್ಯಕ್ಷರಾದ ಪ್ರದೀಪ್ ಆರಿಕಾಡಿ, ಬ್ಲಾಕ್ ಪಂಚಾಯತ ಸದಸ್ಯೆಯಾದ ಪ್ರೇಮ ಶೆಟ್ಟಿ, ಪಂಚಾಯತ್ ಜನಪ್ರತಿನಿದಿಗಳಾದ ಮೋಹನ್ ಬಂಬ್ರಾಣ ಪ್ರೇಮಾವತಿ, ವಿದ್ಯಾ ಏನ್ ಪೈ, ಸುಲೋಚನಾ, ಶೋಭಾ, ಪುಷ್ಪಲತಾ ಕಾಜೂರ್, ವಿವೇಕಾನಂದ ಶೆಟ್ಟಿ, ಅಜಯ್ ನೈಕಾಪು, ಹಿರಿಯರಾದ ಗೋಪಾಲ್ ಪೂಜಾರಿ, ನೇತಾರರದ ಜಗದೀಶ್ ಪೇರಲಾ, ಸುಭ್ರಮಣ್ಯ ನಾಯಕ್, ಡಿ ಏನ್ ಶೆಟ್ಟಿ ಹಾಗೂ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು. ಕುಂಬಳೆ ಮಂಡಲ ಉಪಾಧ್ಯಕ್ಷರಾದ ರಮೇಶ್ ಭಟ್ ಸ್ವಾಗತಿಸಿ, ಒಬಿಸಿ ಮೋರ್ಚಾ ಕುಂಬಳೆ ಅಧ್ಯಕ್ಷರಾದ ಮಹೇಶ್ ಪುನೀಯೂರ್ ವಂದಿಸಿದರು ಹಾಗೂ ಕುಂಬಳೆ ಪಂಚಾಯತ್ ಕಾರ್ಯದರ್ಶಿಗೆ ಕೂಡಲೇ ಇದರ ವಿರುದ್ಧ ಕ್ರಮಕೈಗೊಳ್ಳಬೇಕಾಗಿ ಮನವಿ ಸಲ್ಲಿಕೆ ಮಾಡಲಾಯಿತು.
Tags


