ಮಂಜೇಶ್ವರ: ಹಿಂದೂ ಸಮಾಜವು ಒಗ್ಗೂಡಿ ನಿಂತರೆ ಯಾವುದೇ ಸಮಾಜದ ಕ್ಷೇತ್ರದ ಜೀರ್ಣೋದ್ದಾರ ಕಾರ್ಯವು ಯಶಸ್ವಿಯಾಗಿ ನಡೆಯುತ್ತಿದೆ ಎಂಬುದನ್ನ ನಾವಿಂದು ಇಲ್ಲಿ ಕಾಣುತ್ತಿದ್ದೇವೆ. ವಿಶ್ವಕರ್ಮ ಸಮಾಜ ಎಂಬುದು ಹಿಂದೂ ಧರ್ಮದಲ್ಲಿ ಪ್ರಧಾನ ಸಮಾಜವಾಗಿದೆ. ಹಿಂದೂ ಸಮಾಜದ ಯಾವುದೇ ಆರಾಧಾನಾಲಯಗಳಲ್ಲಿ ಧಾರ್ಮಿಕ ಕಾರ್ಯವಾಗಲೀ, ಕಾರ್ಯ ನಡೆಯಬೇಕಾದರೆ ವಿಶ್ವಕರ್ಮರ ಉಪಸ್ಥಿತಿ ಹಾಗೂ ಅವರ ಕೈ ಸ್ಪರ್ಶ ಶುಭ ಕಾರ್ಯಕ್ಕೆ ಪ್ರಧಾನ. ಇಂದು ಸಮಾಜದ ಪ್ರಮುಖ ಸ್ಥಾನದಲ್ಲಿರುವ ವಿಶ್ವಕರ್ಮ ಸಮಾಜ ಬಾಂಧವರ ಕುಟುಂಬದ ಪೂರ್ವಿಕರು ಹೊಸಂಗಡಿ ಮಣ್ಣಿನಲ್ಲಿ ಆರಾಧಿಸಲ್ಪಡುತ್ತಿದ್ದ ಆಧಿಕ್ಷೇತ್ರ ರಕ್ತೇಶ್ವರೀ ತಾಯಿಯು ಇಡೀ ಊರಿಗೆ ಹಾಗೂ ಸಮಾಜಕ್ಕೆ ಪ್ರಧಾನ ತಾಯಿಯಾಗಿ ಭಕ್ತರನ್ನು ಹರಸುತ್ತಿದ್ದಾಳೆ. ಪೂರ್ವ ಕ್ಷೇತ್ರವು ಇಂದು ಜೀರ್ಣೋದ್ದಾರಗೊಂಡು ತಾಯಿಯ ಪ್ರತಿಷ್ಠೆ ನಡೆಯುವ ಮೂಲಕ ಸಮಾಜಕ್ಕೆ ಪ್ರೇರಣೆಯಾಗಿದೆ.. ಎಂದು ಕನಿಲ ಶ್ರೀ ಭಗವತೀ ಕ್ಷೇತ್ರದ ಗುರಿಕಾರ ರಾದ: ಪುರುಷೋತ್ತಮ ಗುರಿಕಾರರು ನುಡಿದರು. ಅವರು ಇಂದು ಸಂಜೆ ಹೊಸಂಗಡಿ ಶ್ರೀ ಆದೀಕ್ಷೇತ್ರ ರಕ್ತೇಶ್ವರಿ ದೇವಸ್ಥಾನದ ನವೀಕರಣ ಪುನರ್ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮದಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು: ಕ್ಷೇತ್ರದ ಜೀರ್ಣೋದ್ದಾರ ಸಮಿತಿ ಗೌರವಧ್ಯಕ್ಷರಾದ ಬಿ. ಎನ್ ಪದ್ಮನಾಭ ಆಚಾರ್ಯ ಬಾಡೂರು ವಹಿಸಿದ್ದರು. ವೇದಿಕೆಯಲ್ಲಿ ನ್ಯಾಯವಾದಿ ಗಂಗಾಧರ ಆಚಾರ್ಯ ಕೊಂಡೆವೂರು, ಸುಂದರ ಆಚಾರ್ಯ ಕೋಟೆಕಾರು, ನ್ಯಾಯವಾದಿ ಪ್ರಭಾಕರ ಆಚಾರ್ಯ ಕೋಟೆಕಾರು, ನ್ಯಾಯವಾದಿ ರಾಜೇಶ್ ಆಚಾರ್ಯ ತಾಳಿಪಡ್ಪು, ಉದಯ ಗುರುಸ್ವಾಮಿ ಪಾವಳ, ಕೆ. ನಾರಾಯಣ ಕನಿಲ, ವೀರಭಾಸ್ಕರ ಮಂಜೇಶ್ವರ, ಶೇಷಪ್ಪ ಸಾಲ್ಯಾನ್ ವಾಮಂಜೂರು, ಶ್ರೀಮತಿ ಆಶಾಲತಾ ಪೆಲಪ್ಪಾಡಿ, ಶ್ರೀಮತಿ ವನಿತಾ ತುಕಾರಾಮ ಆಚಾರ್ಯ ಕೊಂಡೆವೂರು, ಪದ್ಮನಾಭ ಕಡಪ್ಪರ ಮೊದಲಾದವರು ಉಪಸ್ಥಿತರಿದ್ದು, ಶುಭಾಶಂಸನೆಗೈದರು. ಪು. ನಿರಂಜನ ಆಚಾರ್ಯ ನೀರ್ಚಾಲು ಪ್ರಾರ್ಥನೆ ಹಾಡಿ, ಧಾರ್ಮಿಕ ಮುಂದಾಳು ಹರೀಶ್ ಶೆಟ್ಟಿ ಮಾಡ ಸ್ವಾಗತಿಸಿ, ದಿನಕರ್ ಬಿ.ಎಂ ನಿರೂಪಿಸಿ, ವಂದಿಸಿದರು.


