ಮಂಜೇಶ್ವರ : ಸಿಪಿಐ ಪಕ್ಷದ ಹಿರಿಯ ನೇತಾರರೂ, ಕಿಸಾನ್ ಸಭಾದ ರಾಜ್ಯ ಸಮಿತಿ ಸದಸ್ಯರೂ, ಮಜಿಬೈಲ್ ಸೇವಾ ಸಹಕಾರಿ ಬ್ಯಾಂಕಿನ ಸುದೀರ್ಘಕಾಲದ ಅಧ್ಯಕ್ಷರಾಗಿದ್ದ ಮೂಡಂಬೈಲ್ ಕೃಷ್ಣ ಶೆಟ್ಟಿಯವರ 13ನೇ ಚರಮ ವಾರ್ಷಿಕದ ಅನುಸ್ಮರಣಾ ಸಮ್ಮೇಳನವನ್ನು ಅವರ ಸ್ವಗೃಹದ ಬಳಿ ಇರುವ ಸ್ಮೃತಿ ಮಂಟಪದ ಪರಿಸರ ನೀರಹಳ್ಳಿಯಲ್ಲಿ ಆಚರಿಸಲಾಯಿತು. ಪಕ್ಷದ ಮಂಡಲ ಕಾರ್ಯದರ್ಶಿಯೂ, ಮೀಂಜ ಗ್ರಾಮ ಪಂಚಾಯತಿನ ಉಪಾಧ್ಯಕ್ಷರಾದ ಜಯರಾಮ್ ಬಲ್ಲಂಗುಡೇಲ್ ಸಂಸ್ಮರಣಾ ಕಾರ್ಯಕ್ರಮ ಉದ್ಘಾಟಿಸಿ ಗುಣ ಗಾನ ಮಾಡಿದರು. ಸಿಪಿಐ ಮಂಡಲ ನಿರ್ವಾಹಕ ಸಮಿತಿ ಸದಸ್ಯ ರಾಮಕೃಷ್ಣ ಕಡಂಬಾರ್, ಕರ್ನಾಟಕ ಯಕ್ಷಗಾನ ಅಕಾಡೆಮಿ ಸ್ಥಾಯಿ ಸಮಿತಿ ಸದಸ್ಯ ಎಂ.ದಾಮೋದರ ಶೆಟ್ಟಿ, ಕಡಂಬಾರ್ ಸ್ಥಳೀಯ ಕಾರ್ಯದರ್ಶಿ ಹರೀಶ್ ಶೆಟ್ಟಿ, ಕೆ.ಸಿ.ಇ.ಸಿ ಮುಖಂಡ ಉದಯ ಕುಮಾರ್, ಮಾಜಿ ಪಂಚಾಯತ್ ಸದಸ್ಯೆ ರೋಶಿನಿ ಜಯರಾಮ್, ಕೃಷ್ಣ ಶೆಟ್ಟಿಯವರ ಧರ್ಮಪತ್ನಿ ಸರೋಜಿನಿ ಶೆಟ್ಟಿ, ಅಳಿಯ ಗಣೇಶ್ ಶೆಟ್ಟಿ, ಹರಿ ಜೀವನ್ ದಾಸ್, ಮೌನೇಶ್, ಶರತ್ ಕುಮಾರ್ ಬೆಜ್ಜ ಮೊದಲಾದವರು ಮಾತನಾಡಿದರು. ಮೊದಲಿಗೆಸಿಪಿಐ ಮೀಂಜ ಲೋಕಲ್ ಕಾರ್ಯದರ್ಶಿ ಗಂಗಾಧರ್ ಕೊಡ್ಡೆ ಸ್ವಾಗತಿಸಿದರು.ಮಜಿಬೈಲ್ ಬ್ಯಾಂಕ್ ನಿರ್ದೇಶಕ ಸತೀಶ್ ಪಜಂಗಾರ್ ಅಧ್ಯಕ್ಷತೆ ವಹಿಸಿದರು. ಕೃಷ್ಣ ಶೆಟ್ಟಿಯವರ ಸ್ಮೃತಿ ಮಂಟಪಕ್ಕೆ ಪುಷ್ಪಾರ್ಚನೆ ನಡೆಸಲಾಯಿತು.
ಸಿಪಿಐ ನೇತಾರ, ಮಜಿಬೈಲ್ ಸೇವಾ ಸಹಕಾರಿ ಬ್ಯಾಂಕಿನ ಸುದೀರ್ಘಕಾಲದ ಅಧ್ಯಕ್ಷರಾಗಿದ್ದ ಮೂಡಂಬೈಲ್ ದಿ. ಕೃಷ್ಣ ಶೆಟ್ಟಿಯವರ ಅನುಸ್ಮರಣಾ ಕಾರ್ಯಕ್ರಮ
June 21, 2022
0
Tags

