ಮಂಜೇಶ್ವರ: ಕಡಂಬಾರು ಚೆಂಬಪದವು ನಿವಾಸಿ ಬಿ ಎಂ ರಮೇಶ ಆಚಾರ್ಯ (85) ಅಲ್ಪಕಾಲದ ಅಸೌಕ್ಯದಿಂದ ಬಳಲುತ್ತಿದ್ದು, ಇಂದು ಬೆಳಗ್ಗೆ ಸ್ವ - ಗೃಹದಲ್ಲಿ ನಿಧನರಾದರು. ಮೃತರು ವೃತ್ತಿಯಲ್ಲಿ ಬಡಗಿಯಾಗಿದ್ದರೂ, ಕೆತ್ತನೆ ಹಾಗೂ ಶಿಲ್ಪ ಶಾಸ್ತ್ರದಲ್ಲಿ ಪ್ರಾವೀಣ್ಯತೆ ಪಡೆದಿದ್ದರು. ಕನಿಲ ಶ್ರೀ ಭಗವತೀ ಕ್ಷೇತ್ರದಲ್ಲಿ "ಅರೂಡ ಶಿಲ್ಪಿ" ಯಾಗಿ ಕಳೆದ 35 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಹಿರಿಯ ಭಜನಾ ಸಂಕೀರ್ತನಾಕಾರರದ ಇವರು ಓಜ ಸಾಹಿತ್ಯ ಕೂಟ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನದ ಮಾಜಿ ಅಧ್ಯಕ್ಷರಾಗಿದ್ದು, ಕ್ಷೇತ್ರದ ಆಡಳಿತ ಸಮಿತಿಯ ಸದಸ್ಯರಾಗಿದ್ದರು. ಮೃತರು ಪತ್ನಿ: ರಾಜೀವಿ, ಮಕ್ಕಳಾದ: ಭುವನೇಶ್ವರೀ, ಪ್ರದೀಪ್ ಆಚಾರ್ಯ, ಉದಯ ಆಚಾರ್ಯ, ಗೋಕುಲ ಆಚಾರ್ಯ, ಸೋಮನಾಥ ಆಚಾರ್ಯ, ತಾರಾನಾಥ ಆಚಾರ್ಯ, ಭಾರತಿ, ನವೀನ, ಯೋಗೀಶ್ವರೀ, ಅಳಿಯಂದಿರು ಸೊಸೆಯಂದಿರಾದ: ಮಂಜುನಾಥ ಆಚಾರ್ಯ ಕಿದೂರು (ಮೈಸೂರು), ಜ್ಞಾನೇಶ ಆಚಾರ್ಯ ಬೆಂಗಳೂರು, ಮೌನೇಶ್ ಆಚಾರ್ಯ ಮಧೂರು, ರೇಷ್ಮಾ, ನಳಿನಿ, ರಶ್ಮಿ, ಹೇಮಲತಾ, ಕೃಪಾಲಕ್ಷ್ಮಿ, ಸಹೋದರ ಸಹೋದರಿಯರಾದ ಬಿ ಎಂ ಹರಿಶ್ಚಂದ್ರ ಆಚಾರ್ಯ ಕಾಸರಗೋಡು, ನಿರಂಜನ ಆಚಾರ್ಯ ಕಡoಬಾರು, ಸುಂದರ ಆಚಾರ್ಯ, ಸೀತಾ ಆಚಾರ್ಯ ಪುತ್ತೂರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಪೈಕಿ ಇನ್ನೋರ್ವ ಸಹೋದರ ಬಿ.ಎಂ ಮೋಹನ ಆಚಾರ್ಯ ಈ. ಮೊದಲೇ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ರಾತ್ರಿ ಉದ್ಯಾವರ ಮಾಡ ಹಿಂದೂ ರುಧ್ರ ಭೂಮಿಯಲ್ಲಿ ನಡೆಯಲಿದೆ. ಮೃತರ ನಿಧನಕ್ಕೆ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನದ ಆಡಳಿತ ಸಮಿತಿ, ಓಜ ಸಾಹಿತ್ಯ ಕೂಟ, ಶ್ರೀ ಕಾಳಿಕಾ ಪರಮೇಶ್ವರೀ ವಿಶ್ವಕರ್ಮ ಮಹಿಳಾ ಸಂಘ, ಶ್ರೀ ಗುರು ಸೇವಾ ಪರಿಷತ್, ಕನಿಲ ಶ್ರೀ ಭಗವತೀ ಕ್ಷೇತ್ರದ ಆಡಳಿತ ಸಮಿತಿ ಸಂತಾಪ ಸೂಚಿಸಿದ್ದಾರೆ.
ಕೆತ್ತನೆ ಹಾಗೂ ಶಿಲ್ಪ ಶಾಸ್ತ್ರದಲ್ಲಿ ಪ್ರಾವೀಣ್ಯತೆ ಹೊಂದಿರುವ ಕನಿಲ ಶ್ರೀ ಭಗವತೀ ಕ್ಷೇತ್ರದ ಆರೂಢ ಶಿಲ್ಪಿ, ಹಿರಿಯ ಭಜನಾ ಸಂಕೀರ್ತನಕಾರರಾದ ಬಿಎಂ ರಮೇಶ್ ಆಚಾರ್ಯ ಕಡoಬಾರು ನಿಧನ.
June 14, 2022
0
Tags

