ಮಂಜೇಶ್ವರ:- 2021--22 ನೇ ಶೈಕ್ಷಣಿಕ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ಎ+ ಪಡೆದ ಧರ್ಮತಡ್ಕ ಶ್ರೀ ದುರ್ಗಾ ಪರಮೇಶ್ವರಿ ವಿದ್ಯಾಲಯದ ನಾಲ್ಕು ಪ್ರತಿಭೆಗಳನ್ನು ಕುಡಾಲು ಪ್ರದೇಶದ ಜನಪರ ಸೇನಾ ಸಂಘಟನೆಯಾದ "ಕುಡಾಲ್ದ ಜವನೆರ್" ವಾಟ್ಸಪ್ ಗ್ರೂಪಿನ ಗುರಿಕ್ಕಾರರಾದ ಮುಂಬಯಿ ಉದ್ಯಮಿ, ಕುಡಾಲು ಗುತ್ತು ಗಣೇಶ್ ರೈಯವರ ನೇತೃತ್ವದಲ್ಲಿ ಸನ್ಮಾನ ಪತ್ರ ಹಾಗೂ ನಗದು ಪುರಸ್ಕಾರಗಳೊಂದಿಗೆ ಇಂದು ಬೆಳಗ್ಗೆ ಮನೆಗೆ ತೆರಳಿ ಸನ್ಮಾನಿಸಲಾಯಿತು.ಗ್ರೂಪಿನ ಪ್ರಧಾನ ಅಡ್ಮಿನ್ಗಳಾದ ಬಷೀರ್ ಬಿಎ, ಶಿವಪ್ರಸಾದ್ ಶೆಟ್ಟಿ, ಕೆಬೀರ್, ಕಾರ್ಡೆಲ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಕುಡಾಲ್ದ ಜವನೆರ್ ವಾಟ್ಸಪ್ ಗ್ರೂಪಿನ ವತಿಯಿಂದ ಸನ್ಮಾನ
July 13, 2022
0
Tags




