ಹೊಸಂಗಡಿ : ವಿಶ್ವ ಹಿಂದೂ ಪರಿಷತ್ ಬಜರಂಗದಳದ ಮಂಜೇಶ್ವರ ಖಂಡ ಸಮಿತಿಯ ವತಿಯಿಂದ ರಾಜಸ್ಥಾನದ ಉದಯಪುರ್ ನಲ್ಲಿ ನಡೆದ ಬಡ ಕುಟುಂಬದ ಕನ್ನಯ್ಯ ಲಾಲ್ ಇವರ ಘನ ಘೋರ ಹತ್ಯೆಯನ್ನು ಖಂಡಿಸಿ ಉಗ್ರವಾದಿಗಳ ವಿರುದ್ಧ ಹೊಸಂಗಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಭಾರತದಲ್ಲಿ ಇರುವ ಉಗ್ರವಾದಿಗಳನ್ನು ಖಂಡಿಸಿ ಹಿಂದೂ ಧಾರ್ಮಿಕ ಮುಖಂಡರಾದ ಮಂಜುನಾಥ್ ಉಡುಪರು ಮಾತಾನಾಡಿದರು.
ಅದೇ ರೀತಿ ಈ ಕಾರ್ಯಕ್ರಮದಲ್ಲಿ ಬಜರಂಗದಳದ ಕಾಸರಗೋಡು ಜಿಲ್ಲಾ ಸಂಯೋಜಕ್ ಶೈಲೇಶ್ ಅಂಜರೆ, ಹಾಗೂ ನೇತಾರರಾದ ಕೌಶಿಕ್ ಮಾಡ, ಸುದೀನ್ ಕರ್ಕೇರ, ಪವನ್ ಹೊಸಂಗಡಿ, ರವಿ ಪರಂಕಿಲ,ಗುರುಕಿರಣ್ ಹೊಸಂಗಡಿ, ಭವಿಷ್ಯ್ ಕಣ್ವತೀರ್ಥ, ನೀಖಿಲ್ ಮಾಡ, ನವೀನ್ ಬೆಜ್ಜ, ಸಂತೋಷ್ ದೆೃಗೋಳಿ,ಹರೀಶ್ ಹೊಸಂಗಡಿ, ಜಗದೀಶ್ ಪ್ರತಾಪ್ ನಗರ್, ಹಷೀತ್ ಶಾರದನಗರ, ಪ್ರಜ್ವಲ್ ಶೆಟ್ಟಿ ಮಾಡ, ಕಿಶೋರ್ ಭಗವತಿ ಮೊದಲಾದವರು ಭಾಗವಹಿಸಿದರು.
ವಿಶ್ವ ಹಿಂದೂ ಪರಿಷತ್ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಯಾದವ್ ಕಿರ್ತೇಶ್ವರ ಸ್ವಾಗತಿಸಿದರು,
ವಿಶ್ವ ಹಿಂದೂ ಪರಿಷತ್ ಕಾಸರಗೋಡು ಜಿಲ್ಲಾ ಸೇವಾಪ್ರಮುಖ್ ಸುರೇಶ್ ವಿ.ಶೆಟ್ಟಿ ಪರಂಕಿಲ ಧನ್ಯವಾದವಿತ್ತರು.

