ಮಂಗಳೂರು ಕಣ್ಣೂರಿನಲ್ಲಿ ಮಕ್ಕಳೇ ಪ್ರಾರಂಭಿಸಿದ ಬಾಲ ಗಣೇಶೋತ್ಸವ
August 31, 2022
0
ಕಣ್ಣೂರು ಕಂಬ್ಲಕೋಡಿಯಲ್ಲಿ ಮಕ್ಕಳೇ ಪ್ರಾರಂಭಿಸಿದ ಬಾಲ ಗಣೇಶೋತ್ಸವದ 4ನೇ ವರ್ಷದ ಗಣೇಶೋತ್ಸವವು ಇಂದು ಬೆಳಗ್ಗೆ ಪ್ರತಿಷ್ಠಾಪನೆಗೊಳಿಸಲಾಗಿದ್ದು ಇಂದು ರಾತ್ರಿ 8ಗಂಟೆಗೆ ಶೋಭಾಯಾತ್ರೆಯ ಮೂಲಕ ವಿಸರ್ಜನೆ ನಡೆಸಲಾಗುವುದು ಎಂದು ಇದರ ರೂವಾರಿ ಪುಟಾಣಿಗಳಾದ ಅರ್ಪಿತ್,ಅತಿಥ್, ಪೃಥ್ವಿ, ಲಿಖಿತ್, ಚಿರಾಗ್, ಭವಿಷ್ ತಿಳಿಸಿದ್ದಾರೆ. ಮಕ್ಕಳು ಮಕ್ಕಳಾಟಿಕೆಯಲ್ಲಿ ಪ್ರಾರಂಭಿಸಿದ ಈ ಬಾಲ ಗಣೇಶೋತ್ಸವವನ್ನು ನಿಲ್ಲಿಸಬಾರದು ಮುಂದುವರಿಸಿಕೊಂಡು ಹೋಗಬೇಕೆಂದು ತಿಳಿದು ಬಂದಿದ್ದು ಆದುದರಿಂದ ಒಂದು ದಿನದ ಗಣೇಶೋತ್ಸವವನ್ನು ಈ ಮಕ್ಕಳು ಅದ್ದೂರಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.
Tags

