ಹೊಸಂಗಡಿ : ಚಕ್ರವರ್ತಿ (ರಿ.) ಹೊಸಂಗಡಿ ಸಂಸ್ಥೆಯ ಸಕ್ರೀಯ ಸದಸ್ಯ ಛಾಯಾಚಿತ್ರಗಾರ ದೀಪಕ್ ರಾಜ್ ಉಪ್ಪಳ ಇವರು ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳುತ್ತಿದ್ದು ಇವರನ್ನ ಚಕ್ರವರ್ತಿ ಸಂಸ್ಥೆಯ ಪರವಾಗಿ ಇಂದು ಸಂಜೆ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿ, ಸಂಸ್ಥೆಯ ಪರವಾಗಿ ಬೀಳ್ಕೊಡಲಾಯಿತು.
ಚಕ್ರವರ್ತಿ ಸಂಸ್ಥೆಯ ಗೌರವ ಮಾರ್ಗದರ್ಶಕರಾದ ಪುರುಷೋತ್ತಮ ಗುರಿಕಾರರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಈ ವೇಳೆ ಸಂಸ್ಥೆಯ ಅಧ್ಯಕ್ಷರಾದ ಶಿವಪ್ರಸಾದ್ ಪೆಲಪ್ಪಾಡಿ, ಪ್ರಧಾನ ಕಾರ್ಯದರ್ಶಿ ರತನ್ ಕುಮಾರ್ ಹೊಸಂಗಡಿ, ಕೋಶಾಧಿಕಾರಿ: ಸಾಯಿ ಕಿರಣ್ ಪೆಲಪ್ಪಾಡಿ, ಸಾಂಸ್ಕೃತಿಕ ಕಾರ್ಯದರ್ಶಿ: ಸುರೇಶ್ ಗಾನಿಂಜಾಲ್, ಪದಾಧಿಕಾರಿಗಳಾದ ಅಶೋಕ್ ಅಂಗಡಿ ಪದವು, ಹರೀಶ್ ಅಟ್ಲಾಸ್, ಸದಾಶಿವ ಗುಡ್ಡೆ ಹೌಸ್, ಗೋಪಾಲ ಬಿ.ಎಂ, ರಾಜೇಶ್ ಮಜಿಬೈಲ್, ಲೋಕೇಶ್ ಮಜಾಲ್, ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದ ಅಧ್ಯಕ್ಷರಾದ ಪದ್ಮನಾಭ ಕಡಪ್ಪರ, ನ್ಯಾಯವಾದಿ ನವೀನ್ ರಾಜ್ ಕೆ.ಜೆ, ಮೊದಲಾದವರು ಉಪಸ್ಥಿತರಿದ್ದರು.


