ಮಂಜೇಶ್ವರ : ಕಾಸರಗೋಡು ಜಿಲ್ಲಾ ಕುಲಾಲ ಸಂಘದ 38ನೇ ವಾರ್ಷಿಕ ಮಹಾಸಭೆ ಆಗಸ್ಟ್ ತಿಂಗಳ 7 ನೇ ತಾರೀಕು ಆದಿತ್ಯವಾರ ದಂದು ಪೈವಳಿಕೆ ಕುಲಾಲ ಸಮಾಜ ಮಂದಿರ ಲಾಲ್ ಬಾಗ್, ಕಾಯರ್ ಕಟ್ಟೆಯಲ್ಲಿ ಜರಗಲಿದೆ.
ಬೆಳಗ್ಗೆ 9 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಆರಂಭಗೊಳ್ಳಲಿದ್ದು 10.30 ರಿಂದ ಮಹಾ ಸಭೆ ಆರಂಭ ಗೊಳ್ಳಲಿದೆ. ಪ್ರತಿಭಾ ಪುರಸ್ಕಾರ, ತ್ರಿಸ್ತರ ಪಂಚಾಯತಿ ಚುನಾವಣೆಯ ವಿಜೇತ ಪ್ರತಿನಿಧಿಗಳಿಗೆ ಸನ್ಮಾನ, ಸಾಧಕರಿಗೆ ಗೌರವಾರ್ಪಣೆ, ವಿದ್ಯಾರ್ಥಿ ವೇತನ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ರಾದ ಶ್ರೀ ರವೀಂದ್ರ ಮುನ್ನಿಪ್ಪಾಡಿ ನ್ಯಾಯವಾದಿ ವಹಿಸಲಿದ್ದು, ಮುಖ್ಯ ಅಥಿತಿಗಳಾಗಿ ಶ್ರೀ ಚಂದಪ್ಪ ಮೂಲ್ಯ ಮಾಲಕರು ಅಮೂಲ್ಯ ಗ್ಯಾಸ್ ಹಾಗೂ ನಿವೃತ್ತ ಡೆಪ್ಯೂಟಿ ಕಮಾಂಡಂಟ್ BSF,
ಲಯನ್ ಅನಿಲ್ ದಾಸ್ ಉದ್ಯಮಿ, ಅಧ್ಯಕ್ಷರು ಕುಲಾಲ ಭವನ ಕಟ್ಟಡ ಸಮಿತಿ ಕುಲಾಲ ಸಂಘ ಕೊಲ್ಯ, ಶ್ರೀ ಜಿ. ಪ್ರೇಮಾನಂದ ಕುಲಾಲ್ ಕೋಡಿಕಲ್ ಅಧ್ಯಕ್ಷರು ಶ್ರೀ ವೀರನಾರಾಯಣ ಸೇವಾ ಟ್ರಸ್ಟ್ ಕುಲಶೇಖರ, ಶ್ರೀಮತಿ ಜಯಶ್ರೀ. ಕೆ. ಅಸಿಸ್ಟೆಂಟ್ ಪ್ರೊಫೆಸರ್ ಕೆನರಾ ಇಂಜಿನಿಯರ್ ಕಾಲೇಜು, ಶ್ರೀ ಚಂದ್ರಹಾಸ್ ಕಟೀಲ್ ಮಾಲಕರು ನಿಧಿಶಾ ಎಂಟರ್ಪ್ರೈಸಸ್, ಬಿಜೈ ಮಂಗಳೂರು , ಶ್ರೀ ಗಣೇಶ್ ಕೆ. ಟಿ ಮಾಲಕರು ಶ್ರೀ ಲಕ್ಷ್ಮಿ ಫರ್ನಿಚರ್ ಬಿಜೈ ಮಂಗಳೂರು, ಶ್ರೀಮತಿ ಕಮಲಾಕ್ಷಿ ಸದಸ್ಯರು ಜಿಲ್ಲಾ ಪಂಚಾಯತ್ ವರ್ಕಾಡಿ ಡಿವಿಜನ್, ಶ್ರೀ ಮೋಹನ್ ಕೆ. ಕಡಂಬಾರು ನಿವೃತ್ತ ಸೈನಿಕ, ಶ್ರೀಮತಿ ಜಯಂತಿ ಸದಸ್ಯರು ಕಾಸರಗೋಡು ಬ್ಲಾಕ್ ಪಂಚಾಯತ್ ನಿರ್ಚಾಲು ಡಿವಿಜನ್,ಶ್ರೀ ಬಾಬು ಮೂಲ್ಯ ವಾದ್ಯಪಡ್ಪು ಅಧ್ಯಕ್ಷರು ಕುಲಾಲ ಸಂಘ ಪೈವಳಿಕೆ ಶಾಖೆ, ಶ್ರೀಮತಿ ಗಿರಿಜಾ ಎಸ್. ಬಂಗೇರ ಹೊಸಬೆಟ್ಟು ಮಾಜಿ ಅಧ್ಯಕ್ಷೆ ಜಿಲ್ಲಾ ಕುಲಾಲ ಮಹಿಳಾ ಘಟಕ ಭಾಗವಹಿಸುವರು.
ಸ್ವಜಾತಿ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.

