ಉಡುಪಿ : ಬಾಂಧವ್ಯ ಬ್ಲಡ್ ಕರ್ನಾಟಕ ಸಂಸ್ಥೆಯ ಉಸಿರು ಯೋಜನೆಯ ಮೂಲಕ ಉಸಿರಾಟದ ತೊಂದರೆಯಿಂದ ಬೆಂಗಳೂರು ಇಲೆಕ್ಟ್ರಾನ್ ಸಿಟಿ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂಲ್ಕಿ ನಿವಾಸಿ ಸುಮನಾ ಕಾಮತ್ ಎಂಬುವವರ ಒಂದು ತಿಂಗಳು ನವಜಾತ ಶಿಶುವಿನ ಚಿಕಿತ್ಸೆಗಾಗಿ ರೂ 2.25ಲಕ್ಷದ ಚೆಕ್ಕ್ ನ್ನು ಸುಮನಾ ಕಾಮತ್ರವರಿಗೆ ವೃಕ್ಷಮಾತೆ ಪದ್ಮಶ್ರೀ ನಾಡೋಜಾ ಡಾl ಸಾಲುಮರದ ತಿಮ್ಮಕ್ಕನವರ ಮೂಲಕ ನೀಡಲಾಯಿತು.ಈ ಸಂದರ್ಭ ದಿನೇಶ್ ಬಾಂಧವ್ಯ ಇವರನ್ನು ಸಾಲುಮರದ ತಿಮ್ಮಕ್ಕ ವಿಶೇಷವಾಗಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಪುನೀತ್ ಕೆರೇಹಳ್ಳಿ, ಸಮಾಜ ಸೇವಕ ಸುಗುಟೂರು ಮಂಜುನಾಥ್, ಕಿರುತೆರೆ ನಿರ್ದೇಶಕ ವಿಜಯ್ ಕೃಷ್ಣ ಉಡುಪಿ, ಸಮಾಜ ಸೇವಕ ಆನಂದ್ ಯಾದವ್, ಪರಿಸರ ಪ್ರೇಮಿ ಉಮೇಶ್ ವನಸಿರಿ, ಬಾಂಧವ್ಯ ಬ್ಲಡ್ನ ಸ್ಥಾಪಕಾಧ್ಯಕ್ಷ ದಿನೇಶ್ ಬಾಂಧವ್ಯ, ಅಂಬಿಕಾ ವಕ್ವಾಡಿ, ಅಶ್ವಿನಿ ವಿಜಯ್, ಶಿವು ಕುಂದಾಪುರ, ನಿತೀಶ್ ಬಾರಾಧ್ವಾಜ್, ಮನೀಶ್ ಮೊಯ್ಲಿ, ಶ್ರೀನಿಧಿ ನಾಯಕ್, ಅನಂತ್ ಕೃಷ್ಣ ನಾಯಕ್ ಮುಂತಾದವರು ಉಪಸ್ಥಿತರಿದ್ದರು.
ಬಾಂಧವ್ಯ ಬ್ಲಡ್ ಕರ್ನಾಟಕ ಸಂಸ್ಥೆಯ ಉಸಿರು ಯೋಜನೆ : ನವಜಾತ ಶಿಶುವಿನ ಚಿಕಿತ್ಸೆಗೆ 2.25ಲಕ್ಷ ನೆರವು
August 03, 2022
0
Tags



