ನ್ಯೂಸ್ ಬ್ಯೂರೋ : 'ಮಂಜುಶ್ರೀ ನ್ಯೂಸ್' ದಕ್ಷಿಣ ಕನ್ನಡ
ಮಂಗಳೂರು : ಹೊರವಲಯದ ಪಡೀಲು ಸಮೀಪದ ಅಳಪೆ ಎಂಬಲ್ಲಿ ಖಾಸಗಿ ಬಸ್ ಮತ್ತು ಕೆಎಸ್ಆರ್ಟಿಸಿ ಬಸ್ ಮುಖಾಮುಖಿ ಡಿಕ್ಕಿ ಹೊಡೆದಿದ ಘಟನೆ ಇದೀಗ ನಡೆದಿದೆ. ಪರಿಣಾಮ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ದೇರಳಕಟ್ಟೆ ಕುತ್ತಾರು ನಿವಾಸಿ ಪ್ರಕಾಶ್ ಎಂಬವರನ್ನು ಸ್ಥಳೀಯ ಯುವಕರಾದ ರಿಕ್ಷಾ ಚಾಲಕ ಪುಷ್ಪರಾಜ್ ಹಾಗೂ ವಂಶಿ ಪಂಡಿತ್ ಕಣ್ಣೂರು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಸಮಯ ಪ್ರಜ್ಞೆ ಮತ್ತು ಮಾನವೀಯತೆ ಮೆರೆದಿದ್ದಾರೆ. ಖಾಸಗಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮಹಾಲಕ್ಷ್ಮಿ, ಮಲ್ಲಿಕಾ, ಚಂದ್ರಕಲಾ, ನಾಸಿರ್, ಇರ್ಫಾನ್, ಸುಶಾಂತ್, ಧನಂಜಯ, ಧನಲಕ್ಷ್ಮಿ ಅಲ್ಲದೆ ಇನ್ನಷ್ಟು ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂಡಿದ್ದು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ವರದಿ : ವಂಶಿ ಪಂಡಿತ್ ಕಣ್ಣೂರು