ನರೇಂದ್ರ ಮೋದಿ ಹುಟ್ಟು ಹಬ್ಬದ ಪ್ರಯುಕ್ತ ಸತ್ಯನಾರಾಯಣ ಪೂಜೆ | ಸಭಾ ಕಾರ್ಯಕ್ರಮ
September 18, 2022
0
ಮಂಗಳೂರು : ಶ್ರೀ ನರೇಂದ್ರ ದಾಮೋದರದಾಸ್ ಮೋದಿ ಇವರ 72ನೇ ಹುಟ್ಟು ಹಬ್ಬದ ಸಂಭ್ರಮಾಚರಣೆ ಪ್ರಯುಕ್ತ ನರೇಂದ್ರ ಮೋದಿ ಅಭಿಮಾನಿ ಬಳಗ ಕುಡ್ಲ ಇವರ ವತಿಯಿಂದ ಸತ್ಯನಾರಾಯಣ ಪೂಜೆ ಹಾಗೂ ಸಭಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ತೆರಿಗೆ ನಿರ್ಧರಣೆ ಹಣಕಾಸು ಮತ್ತು ಅಪೀಲು ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಕಿಶೋರ್ ಕೊಟ್ಟಾರಿ ನಿರ್ವಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ಅಧ್ಯಕ್ಷರಾದ ವಿಜಯ್ ಕುಮಾರ್ ಶೆಟ್ಟಿ ವಹಿಸಿದರು. ಮಂಗಳೂರು ನಗರ ದಕ್ಷಿಣ ಶಾಸಕರಾದ ಶ್ರೀ ವೇದವ್ಯಾಸ ಕಾಮತ್, ಮಂಗಳೂರು ಮಹಾ ನಗರ ಪಾಲಿಕೆಯ ನೂತನ ಉಪ ಮಹಾ ಪೌರರಾದ ಶ್ರೀಮತಿ ಪೂರ್ಣಿಮಾ ಎಂ, ಮಂಗಳೂರು ಮಹಾ ನಗರ ಪಾಲಿಕೆ ಸದಸ್ಯರುಗಳಾದ ಮನೋಹರ್ ಶೆಟ್ಟಿ ಕದ್ರಿ, ಗಣೇಶ್ ಕುಲಾಲ್, ರೂಪಶ್ರೀ ಪೂಜಾರಿ, ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕರಾದ ಸಂದೇಶ್ ಶೆಟ್ಟಿ, ವಿಶ್ವ ಹಿಂದೂ ಪರಿಷತ್ ಜೋಡುಕಟ್ಟೆ ಘಟಕ ಅಧ್ಯಕ್ಷರಾದ ವಿಠ್ಠಲ್ ಶೆಣೈ, ಉಮೇಶ್ ಜಪ್ಪಿನಮೊಗರು, ಸ್ಕೂಲ್ ಬುಕ್ ಕಂಪೆನಿಯ ಮಾಲಕರಾದ ನೀರಜ್ ಭಂಡಾರಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಈ ವೇಳೆ ಸಮಾಜ ಸೇವೆಯನ್ನು ಗುರುತಿಸಿ ಟೀಮ್ ಮಂಜುಶ್ರೀ ತುಳುನಾಡ್(ರಿ.) ಸಂಸ್ಥೆಗೆ ಸನ್ಮಾನಿಸಲಾಯಿತು. ಟೀಮ್ ಮಂಜುಶ್ರೀ ತುಳುನಾಡ್ ಸಂಸ್ಥೆಯ ಸಂಸ್ಥಾಪಕ, ರಾಜ್ಯಾಧ್ಯಕ್ಷರಾದ ಮನೋಜ್ ಕುಲಾಲ್ ಕೊಡಕ್ಕಲ್ ಸನ್ಮಾನ ಸ್ವೀಕರಿಸಿದರು.
Tags









