ಕುಂಬಳೆ:- ತೀಯ ಸಮಾಜ ಆರಿಕ್ಕಾಡಿ, ಕುಂಬಳೆ ಇದರ ಕಾರ್ಯಕಾರಿ ಸಮಿತಿ ಸಭೆಯು ಈ ತಿಂಗಳ 18 - 09 - 2022 ರವಿವಾರ ಬೆಳಿಗ್ಗೆ 9:00 ಗಂಟೆಗೆ ಸರಿಯಾಗಿ ತೀಯ ಸಮಾಜ ಸಭಾ ಭವನ ಪಾರೆಸ್ಥಾನ ಕ್ಷೇತ್ರ ಸಮೀಪ ನಡೆಯಲಿದೆ. ನಾಲ್ಕು ಊರಿನ (ಕುಂಬಳೆ, ಕಾರ್ಲೆ, ಆರಿಕ್ಕಾಡಿ - ಇಚ್ಚ್ಲಂಪಾಡಿ, ಬಂಬ್ರಾಣ) ನೂರು ವಿಲ್ಲು ತೀಯಾ ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕಾಗಿ ಆರಿಕ್ಕಾಡಿಯ ತೀಯಾ ಸಮಾಜದ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಕೇಳಿಕೊಂಡಿದ್ದಾರೆ.
ಕಾರ್ಯಕ್ರಮಗಳು : ಪ್ರಾರ್ಥನೆ, ಸ್ವಾಗತ, ಅಧ್ಯಕ್ಷರ ಮಾತು, ವರದಿ ವಾಚನ, 2021 - 2022 ಲೆಕ್ಕಪತ್ರ ಮಂಡನೆ, ನೂತನ ಪದಾಧಿಕಾರಿಗಳ ಆಯ್ಕೆ, ಅಧ್ಯಕ್ಷರ ಅನುಮತಿ ಮೇರೆಗೆ ಇನ್ನಿತರ ವಿಷಯಗಳು, ಧನ್ಯವಾದ. ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
8, ಧನ್ಯವಾದ.
