ಕಿತ್ತಳೆ ಬಣ್ಣದ ಅಂಚನ್ನು ಹೊಂದಿರುವ ಬಿಳಿ ಸೀರೆಯನ್ನು ಉಟ್ಟಿರುವ ದೇವಿಯು ಎಡದ ಕೈಯಲ್ಲಿ ಕಾಮಂದಲು ಮತ್ತು ಬಲದ ಕೈಯಲ್ಲಿ ಜಪಮಾಲೆಯನ್ನು ಧರಿಸಿರುತ್ತಾಳೆ. ಬ್ರಹ್ಮಚಾರಿಣಿ ದೇವಿಯು ಪ್ರೀತಿ ಹಾಗೂ ಶಾಂತಿಯ ಸಂಕೇತ. ಬ್ರಹ್ಮಚಾರಿಣಿ ದೇವಿಯ ಕಥೆಯಲ್ಲಿ ಮಹಿಳೆಯರ ಶಕ್ತಿ ಹಾಗೂ ಬಲವನ್ನು ತೋರಿಸುತ್ತದೆ. ಮದುವೆಯಾಗದೆ ಇರುವ ಪಾರ್ವತಿಯ ರೂಪವೇ ಈ ಬ್ರಹ್ಮಚಾರಿಣಿ ದೇವಿ ಎನ್ನಲಾಗಿದೆ.
ಶಿವನನ್ನು ಮದುವೆಯಾಗಬೇಕೆಂದು ಬಯಸಿದ ಬ್ರಹ್ಮಚಾರಿಣಿ ದೇವಿಯು ಹಲವಾರು ವರ್ಷಗಳ ಕಾಲ ತಪಸ್ಸನ್ನು ಆಚರಿಸುತ್ತಾಳೆ. ಮೊದಲು ಆಕೆ ಕೇವಲ ಹಣ್ಣುಗಳನ್ನು ಮಾತ್ರ ತಿಂದರೆ ಬಳಿಕ ಒಣಗಿದ ಬಿಲ್ವಪತ್ರೆಯ ಎಲೆಗಳನ್ನು ಸೇವಿಸುತ್ತಾಳೆ. ಅಂತಿಮವಾಗಿ ಸಂಪೂರ್ಣ ಆಹಾರವನ್ನು ತ್ಯಜಿಸಿ ತಪಸ್ಸಿನಲ್ಲಿ ಧಾನ್ಯಳಾದ ಬ್ರಹ್ಮಚಾರಿಣಿ ದೇವಿಯ ತಪಸ್ಸಿಗೆ ಒಲಿದ ಬ್ರಹ್ಮನು ಪ್ರತ್ಯಕ್ಷನಾಗಿ ಶಿವನನ್ನು ಮದುವೆಯಾಗು ಎಂದು ವರ ನೀಡುತ್ತಾನೆ.
ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಿದರೆ ನಿಮ್ಮ ಮನಸ್ಸು ತುಂಬಾ ಬಲವಾಗಿರುತ್ತದೆ. ನವರಾತ್ರಿಯ ಎರಡನೇ ದಿನದಂದು ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಿದರೆ ನಿಮಗೆ ಯಾವುದೇ ರೀತಿಯ ಸಮಸ್ಯೆಗಳು ಕಾಡುವುದಿಲ್ಲ. ಬ್ರಹ್ಮಚಾರಿಣಿ ದೇವಿಯನ್ನು ಭಕ್ತಿ, ತ್ಯಾಗ ಮತ್ತು ಸಂಕಲ್ಪದ ಪ್ರತೀಕವೆನ್ನಲಾಗಿದೆ.
ನವರಾತ್ರಿಯ ಎರಡನೇ ದಿನ ಪೂಜಿಸಲ್ಪಡುವ ದೇವಿ
ದುರ್ಗಾ ದೇವಿಯ ಅವತಾರಗಳಲ್ಲಿ ಒಂದಾಗಿರುವ ಬ್ರಹ್ಮಚಾರಿಣಿ ದೇವಿಯನ್ನು ಶಾಂತಿ, ಸಂತೋಷ, ಭಕ್ತಿ ಹಾಗೂ ಸಂಕಲ್ಪದ ದೇವಿಯೆಂದು ನಂಬಲಾಗಿದೆ. ಆಕೆಯ ನಿಜವಾದ ಭಕ್ತಿ ಹಾಗೂ ಸಂಕಲ್ಪದಿಂದಾಗಿ ಆಕೆ ಸಾವಿರಾರು ವರ್ಷಗಳ ಕಾಲ ತಪಸ್ಸನ್ನು ಮಾಡಿದ್ದಾಳೆ. ನವರಾತ್ರಿಯ ವೇಳೆ ಭಕ್ತರು ಉಪವಾಸ ಮಾಡುತ್ತಾರೆ. ಬ್ರಹ್ಮಚಾರಿಣಿ ದೇವಿಯನ್ನು ಎರಡನೇ ದಿನ ಪೂಜಿಸುವುದರಿಂದ ಭಕ್ತರಿಗೆ ಯಾವುದೇ ತೊಂದರೆಯಿಲ್ಲದೆ ತಮ್ಮ ಕರ್ತವ್ಯವನ್ನು ಪೂರೈಸಲು ಸಾಧ್ಯವಾಗುವುದು.
ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವ ಪ್ರಾಮುಖ್ಯತೆಯೇನು?
ಬ್ರಹ್ಮಚಾರಿಣಿಯೆಂದರೆ ಧರ್ಮದ ಜ್ಞಾನವನ್ನು ಪಡೆಯುವಂತಹ ಮಹಿಳೆಯರು ಎಂದರ್ಥ. ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವುದರಿಂದ ಭಕ್ತರು ತಮ್ಮ ಗುರಿಯನ್ನು ತಲುಪಬಹುದಾಗಿದೆ. ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಿದರೆ ನಿಮ್ಮ ಮನಸ್ಸನ್ನು ಕದಡಲು ಯಾರಿಂದಲೂ ಸಾಧ್ಯವಿಲ್ಲ. ದೇವಿಯನ್ನು ತುಂಬಾ ಶ್ರದ್ಧೆ, ಭಕ್ತಿ ಹಾಗೂ ಸಂಕಲ್ಪದೊಂದಿಗೆ ಪೂಜಿಸಬೇಕು.
ಬ್ರಹ್ಮಚಾರಿಣಿ ದೇವಿಯ ಕಥೆ
ಶಿವನನ್ನು ತನ್ನ ಪತಿಯಾಗಿ ಪಡೆಯಲು ಬ್ರಹ್ಮಚಾರಿಣಿ ದೇವಿಯು ಹಲವಾರು ರೀತಿಯ ಸಂಕಷ್ಟಗಳನ್ನು ಎದುರಿಸುತ್ತಾಳೆ. ಇದಕ್ಕಾಗಿ ಆಕೆ ಹಲವಾರು ವರ್ಷಗಳ ಕಾಲ ತಪಸ್ಸನ್ನು ಮಾಡಬೇಕಾಯಿತು. ತಪಸ್ಸನ್ನು ಆಚರಿಸುತ್ತಾ ಇರುವಾಗ ಆಕೆ ಒಣಗಿದ ಬಿಲ್ವಪತ್ರೆಗಳನ್ನು ತಿನ್ನಲು ಆರಂಭಿಸಿದಳು. ಇದರ ಬಳಿಕ ಆಕೆ ಇದನ್ನು ಬಿಟ್ಟುಬಿಟ್ಟಳು. ಆಕೆಯ ತಪಸ್ಸಿಗೆ ಮೆಚ್ಚಿ ಬ್ರಹ್ಮ ಪ್ರತ್ಯಕ್ಷನಾಗಿ ಶಿವನನ್ನು ಮದುವೆಯಾಗುವ ವರ ನೀಡಿದ.
ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವ ಮಂತ್ರ
ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವ ವೇಳೆ ಆಕೆಯ ಮಂತ್ರವನ್ನು ಪಠಿಸಬೇಕು. ದಾದಹಾನ ಕರ್ಪದಮಅಭಯಾಮಸ್ಕಮಲ ಕಾಮದಲು..ದೇವಿ ಪ್ರಸಿದತು ಮಯಿ ಬ್ರಹ್ಮಚಾರಿಣಿಯಂತಮ
ಬ್ರಹ್ಮಚಾರಿಣಿ ದೇವಿಗೆ ಆರತಿ ಬೆಳಗುವುದು ಹೇಗೆ?
ಬ್ರಹ್ಮಚಾರಿಣಿ ದೇವಿಯ ಮೂರ್ತಿಗೆ ಆರತಿ ಎತ್ತುವ ಮೊದಲು ಹಾಲು, ಮೊಸರು ಹಾಗೂ ಜೇನಿನಿಂದ ಅಭಿಷೇಕ ಮಾಡಬೇಕು. ಅಭಿಷೇಕದ ಬಳಿಕ ದುರ್ಗೆಗೆ ನೀಡುವಂತಹ ಭೋಗ್ಯವನ್ನು ಅರ್ಪಿಸಬೇಕು. ಒಂದು ಕೈಯಲ್ಲಿ ಹೂವನ್ನು ಹಿಡಿದುಕೊಂಡು ಮಂತ್ರವನ್ನು ಪಠಿಸಬೇಕು. ಪಂಚಮರಿತ, ಹೂ, ಅಕ್ಕಿ ಮತ್ತು ಕುಂಕುಮದ ಮಜ್ಜನ ಮಾಡಿಸಿ. ಕೆಂಪು ಹೂ ಅಥವಾ ತಾವರೆಯನ್ನು ದೇವಿಯ ಮೂರ್ತಿಯೊಂದಿಗೆ ಇಡಿ. ಬೆಣ್ಣೆಯಲ್ಲಿ ಒಂದು ದೀಪವನ್ನು ಹಚ್ಚಿ ಮತ್ತು ಭಕ್ತಿಯಿಂದ ಆರತಿ ಬೆಳಗಿರಿ.
ದೇವಿಗೆ ಅರ್ಪಿಸುವ ಭೋಗ ಯಾವುದು?
ದೇವಿಗೆ ಸಕ್ಕರೆ ಅಥವಾ ಪ್ರಸಾದವನ್ನು ಅರ್ಪಿಸಿದರೆ ತುಂಬಾ ಒಳ್ಳೆಯದು. ಎರಡನೇ ದಿನದಂದು ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವ ಕಾರಣದಿಂದಾಗಿ ಸಕ್ಕರೆ ಭೋಗಕ್ಕೆ ಅತ್ಯುತ್ತಮ ಆಯ್ಕೆಯೆಂದು ಪರಿಗಣಿಸಲಾಗಿದೆ. ಸಕ್ಕರೆಯನ್ನು ಭೋಗವಾಗಿ ಅರ್ಪಿಸುವ ಕಾರಣದಿಂದ ಕುಟುಂಬ ಸದಸ್ಯರ ಆಯುಷ್ಯ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಿ ನಿಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಿ...
ಕುಮಾರಿ ಪೂಜಾ ಮಹಿಮೆ🌹🌷
ಆಶ್ವೀನಮಾಸದನವರಾತ್ರಿ ಉತ್ಸವ ದಲ್ಲಿ ಪ್ರತಿದಿನ ಎರಡು ವರ್ಷದಿಂದ ಹತ್ತುವರ್ಷದವರೆಗಿನ ಕುಮಾರಿಯರಿಗೆ ಗಂಧ ,ಪುಷ್ಪ ಫಲಾದಿಗಳನ್ನು ಕೂಟ್ಟು ,ಅವರು ಸಂತೋಷಪಡುವ ಹಾಡುಗಳನ್ನು ಹೇಳಿ ಅವರನ್ನು ಪೂಜಿಸಬೇಕು .
ಗಂಧಪುಷ್ಪಫಲಾಧೀನಾಂ ಪ್ರೀತಿಸ್ತವನಪೂರ್ವಕಂ
ದ್ವಿವರ್ಷಕನ್ಯಾರಭ್ಯ ದಶವರ್ಷಾವಧಿ ಕ್ಷಮಾತ್ ಪೂಜಯೇತ್|
ಈ ಕುಮಾರಿಯನ್ನು ಕ್ರಮವಾಗಿ ಕುಮಾರೀ , ತ್ರಿಮೂರ್ತಿನೀ , ಕಲ್ಯಾಣಿ , ರೋಹಿಣೀ , ಕಾಲೀ , ಚಂಡಿಕಾ , ಶಾಂಭವೀ , ದುರ್ಗಾ, ಭದ್ರಾ ಎಂದು ಕರೆಯಲಾಗಿದೆ . ಈ ಹೆಸರಿನ ದೇವಿಯನ್ನು ಎರಡು ವರ್ಷದಿಂದ ಹತ್ತು ವರ್ಷದ ಕುಮಾರಿಯರಲ್ಲಿ ಆವಾಹಿಸಿ ಪೂಜಿಸಬೇಕು. ಭಕ್ಷ್ಯಾದಿಗಳಿಂದ ತೃಪ್ತಿಪಡಿಸಬೇಕು. ಅಲಂಕಾರಾದಿ ವಸ್ತುಗಳನ್ನು ಕುಮಾರಿಯರಿಗೆ ನೀಡಬೇಕು. ಇದರಿಂದ ಆಯುಷ್ಯಾದಿಗಳು ಅಭಿವೃದ್ಧಿಯಾಗುವವು. ಕುಮಾರೀ ಪೂಜೆಯಿಂದ ಅಷ್ಟವಸುಗಳು , ರುದ್ರಾದಿಗಳನ್ನು ಪೂಜಿಸಿದಂತಾಗುತ್ತದೆ
ಪಿತರೋ ವಸವೋ ರುದ್ರಾ ಆದಿತ್ಯಾ ಗಣಲೋಕಪಾಃ |
ಸರ್ವೇ ತೇ ಪೂಜಿತಾಸ್ತೇನ ಕುಮಾರ್ಯೋ ಯೇನ ಪೂಜಿತಾಃ ||
ನವರಾತ್ರಿಯಲ್ಲಿ ಕಡೇಪಕ್ಷ ಒಬ್ಬ ಕನ್ಯೆಯನ್ನು ಪೂಜಿಸಿದರೂ , ಊಟವನ್ನು ಮಾಡಿಸಿದರೂ, ತಿಂಡಿ, ತಿನಿಸು , ಭಕ್ಷ್ಯ ಭೋಜ್ಯಾದಿಗಳನ್ನು ನೀಡಿದರೂ ಐಶ್ವರ್ಯಾದಿಗಳನ್ನು ಹೊಂದಬಹುದು.
ಏಕಾಂ ಕನ್ಯಾಂ ಭೋಜಯಿತ್ವಾ ಐಶ್ವರ್ಯಂ ಲಭತೇ ನರಃ ||
ನವರಾತ್ರಿಯಲ್ಲಿ ಒಂಬತ್ತು ದಿವಸಗಳಲ್ಲಿ ಪೂಜಿಸಲು ಅಸಾಧ್ಯವಾದರೆ ಮೂರು, ಐದು, ಏಳು ದಿವಸಗಳಲ್ಲೂ ಪೂಜಿಸಬಹುದು. ಇದನ್ನೇ ತ್ರೀರಾತ್ರೋತ್ಸವ , ಪಂಚ ರಾತ್ರೋತ್ಸವ , ಸಪ್ತರಾತ್ರೋತ್ಸವ ಎನ್ನಲಾಗಿದೆ.
****
ನವರಾತ್ರಿಯಲ್ಲಿ ಕುಮಾರಿ ಪೂಜಾಫಲ
************
1) ಎರಡು ವರ್ಷದ ಕನ್ಯೆಗೆ ‘ಕುಮಾರಿಕೆ’ ಎಂದು ಹೆಸರು ಇವಳನ್ನು ಪೂಜಿಸುವುಧರಿಂದ ದುಃಖ ದಾರಿದ್ರ್ಯ ನಾಶ ಆಯುಷ್ಯ ಬಲಗಳ ವೃದ್ಧಿಯಾಗುವುದು.
2) ಮೂರು ವರ್ಷಗಳ ಕನ್ಯೆಗೆ ‘ತ್ರಿಮೂರ್ತೀನಿ’ ಎಂದು ಹೆಸರು ಇವಳ ಪೂಜಿಸುವುದರಿಂದ ಆಯುವೃದ್ಧಿ ವ್ಯಾಧಿಪೀಡಪರಿಹಾರ ಧುಃಖಗಳ ನಿವರಣೆಯಾಗುವುದು .
3) ನಾಲ್ಕುವರ್ಷಗಳ ಕನ್ಯೆಗೆ. ‘ಕಲ್ಯಾಣಿ’ ಎಂದು ಹೆಸರು ಇವಳ ಪೂಜೆ ಯಿಂದ ಸೌಖ್ಯ ಧನ ಧನ ಧಾನ್ಯ ಪುತ್ರ ಪೌತ್ರಾಭಿ ವೃದ್ಧಿಯಾಗುತ್ತದೆ
4) ಐದು ವರ್ಷಗಳ ಕನ್ಯೆಗೆ ‘ರೋಹಿಣಿ’ ಎಂದು ಹೆಸರು ಇವಳ ಪೂಜೆ ಯಿಂದ ಆರೋಗ್ಯ, ಸುಖ ಧನ ಯಶಸ್ಸುಲಭಿಸುತ್ತದೆ
5) ಆರು ವರ್ಷಗಳ ಕನ್ಯೆಗೆ ‘ಕಾಲಿಕಾ’ ಎಂದು ಹೆಸರು ವಿದ್ಯಾ ಜಯ ರಾಜ್ಯಾಲಾಭ ಶತ್ರುನಾಶವಾಗುತ್ತದೆ
6) ಏಳು ವರ್ಷಗಳ ಕನ್ಯೆಗೆ ‘ಚಂಡಿಕಾ’ ಎಂದು ಹೆಸರು ಇವಳ ಪೂಜೆ ಯಿಂದ ಸಂಗ್ರಮದಲ್ಲಿ ಜಯ ದುಃಖ ದಾರಿದ್ರ್ಯನಾಶ
7) ಎಂಟು ವರ್ಷಗಳ ಕನ್ಯೆಗೆ ‘ಶಾಂಭವಿ’ ಎಂದು ಹೆಸರು ಇವಳ ಪೂಜೆ ಯಿಂದ ಮ಼ಹಾಪಾಪನಾಶ ಉಗ್ರಕಾರ್ಯಸಾಧನೆ ಯಾಗುತ್ತದೆ
8) ಒಂಬತ್ತು ವರ್ಷಗಳ ಕನ್ಯೆಗೆ ‘ದುರ್ಗಾ’ ಎಂದು ಹೆಸರು ಇವಳ ಪೂಜೆಯಿಂದ ಜ್ಞಾನಪ್ರಾಪ್ತಿ ದುರ್ಗತಿ ನಾಶ, ಸೌಭಾಗ್ಯ. ಧನ ,ಧಾನ್ಯ , ಇಷ್ಟಾರ್ಥಗಳಪ್ರಾಪ್ತಿಯಾಗುತ್ತದೆ
9) ಹತ್ತು ವರ್ಷಗಳ ಕನ್ಯೆಗೆ ‘ಸುಭದ್ರಾ’ ಎಂದು ಹೆಸರು ಇವಳ ಪೂಜೆ ಯಿಂದ ದಾಸ ದಾಸಿಯರ ಹೆಚ್ಚಳವಾಗುತ್ತದೆ.
**
:ಕುಮಾರಿ ಪೂಜಾ ಮಂತ್ರಗಳು:
1. ಜಗತ್ಪೂಜ್ಯೇ ಸರ್ವ ವಂದ್ಯೇ ಸರ್ವ ಶಕ್ತಿ ಸ್ವರೂಪಿಣೀ |
ಪೂಜಾಂ ಗೃಹಾಣ ಕೌಮಾರಿ ಜಗನ್ಮಾತರ್ನಮೋಸ್ತುತೇ ||
2. ತ್ರಿಪುರಾಂ ತ್ರಿಪುರಧಾರಾಂ ತ್ರಿವರ್ಗ ಜ್ಞಾನರೂಪಿಣಿಂ |
ತ್ರೈಲೋಕ್ಯ ವಂದಿತಾಂ ದೇವೀಂ ತ್ರಿಮೂರ್ತಿಂ ಪೂಜಯಾಮ್ಯಹಂ ||
3. ಕಾಲಾತ್ಮಿಕಾಂ ಕಲಾತೀತಾಂ ಕಾರುಣ್ಯಹೃದಯಾಂ ಶಿವಾಂ |
ಕಲ್ಯಾಣ ಜನನೀಂ ನಿತ್ಯಂ ಕಲ್ಯಾಣೀಂ ಪೂಜಯಾಮ್ಯಹಂ ||
4. ಅಣಿಮಾದಿ ಗುಣಾಧಾರಾಮ ಕಾರಾಧ್ಯಕ್ಷರಾತ್ಮಿಕಾಂ |
ಅನಂತ ಶಕ್ತಿಕಾಂ ಲಕ್ಷ್ಮೀಂ ರೋಹಿಣಿಂ ಪೂಜಯಾಮ್ಯಹಂ ||
5. ಕಾಮಚಾರೀಂ ಶುಭಾಂ ಕಾಂತಾಂ ಕಾಲಚಕ್ರ ಸ್ವರೂಪಿಣೀಂ |
ಕಾಮದಾಂ ಕರುಣೋದಾರಂ ಕಾಲೀಂ ಸಂಪೂಜಯಾಮ್ಯಹಂ ||
6. ಚಂಡಾಚಾರಂ ಚಂಡಮಾಯಾಂ ಚಂಡಮುಂಡ ಪ್ರಭಂಜನೀಂ |
ಪೂಜಯಾಮಿ ಸದಾ ದೇವೀಂ ಚಂಡಿಕಾಂ ಚಂಡವಿಕ್ರಮಾಂ ||
7. ಸದಾನಂದಕರೀಂ ಶಾಂತಾಂ ಸರ್ವ ದೇವ ನಮಸ್ಕೃತಾಂ |
ಸರ್ವ ಭೂತಾತ್ಮಿಕಾಂ ಲಕ್ಷ್ಮೀಂ ಶಾಂಭವೀಂ ಪೂಜಯಾಮ್ಯಹಂ ||
8. ದುರ್ಗಮೇ ದುಸ್ತರೇ ಕಾರ್ಯೇ ಭವದುಃಖವಿನಾಶಿನೀಂ|
ಪೂಜಯಾಮಿ ಸದಾ ಭಕ್ತ್ಯಾ ದುರ್ಗಾಂ ದುರ್ಗಾರ್ತಿಹಾರಿಣೀಂ ||
9. ಸುಂದರೀಂಸ್ವರ್ಣವರ್ಣಾಭಾಂ ಸುಖಸೌಖ್ಯ ಪ್ರದಾಯಿನೀಂ |
ಸುಭದ್ರಜನನೀಂ ದೇವೀಂ ಸುಭದ್ರಾಂ ಪೂಜಯಾಮ್ಯಹಮ್ ||
ಮೇಲೆ ತಿಳಿಸಿದಂತೆ ಮನುಷ್ಯರು ಕುಮಾರೀ ಪೂಜೆಯನ್ನು ವಿಧಿಪೂರ್ವಕವಾಗಿ ಆಚರಿಸಬೇಕು...
ಲೇಖನ : ಶ್ರೀ ಬೆಂಗಳೂರು

