ಮಂಗಳೂರು : ಟೀಮ್ ಮಂಜುಶ್ರೀ ತುಳುನಾಡ್(ರಿ.) ಸಂಸ್ಥೆಯ ಬಡವು ಯೋಜನೆಯ 43 ಮತ್ತು 44ನೇ ಸೇವೆ ಹಾಗೂ 16ನೇ ವಿಶೇಷ ಸೇವೆಯು ಮಂಗಳೂರಿನ ಕಾಟಿಪಳ್ಳದ ನಾರಾಯಣ ಎಂಬುವರ ಕುಟುಂಬಕ್ಕೆ ಮತ್ತು ಬೋಳೂರಿನ ರಿಕ್ಷಾ ಚಾಲಕರಾಗಿದ್ದ ಗಂಗಾಧರ ಮತ್ತು ಶ್ರೀಮತಿ ಕಮಲಾಕ್ಷಿ ಎಂಬುವರ ಕುಟುಂಬಕ್ಕೆ ಹಾಗೂ ಹಿರಿಯ ರಂಗಭೂಮಿ ಕಲಾವಿದರಾದ ಶೇಖರ ಶೆಟ್ಟಿ ಹೊಯ್ಗೆಬೈಲ್ ಇವರ ಕುಟುಂಬಕ್ಕೆ ದೈನಂದಿನ ದಿನಸಿ ಸಾಮಗ್ರಿಗಳನ್ನು ಹಸ್ತಾಂತರಿಸುವ ಮೂಲಕ ಜರಗಿತು.ಈ ಸಂದರ್ಭದಲ್ಲಿ ಮಂಗಳೂರು ಮಹಾ ನಗರ ಪಾಲಿಕೆ 6ನೇ ವಾರ್ಡ್ ಸದಸ್ಯೆ ಶ್ರೀಮತಿ ಸರಿತಾ ಶಶಿಧರ್, ಸ್ಥಳೀಯರಾದ ದಿನಕರ್ ಇಡ್ಯಾ, ಹಿರಿಯ ಸಾಹಿತಿಗಳಾದ ಎಸ್ ಜಿ ಹೆಗಡೆ, ಸಂಸ್ಥೆಯ ರಾಜ್ಯ ಘಟಕ ಗೌರವಾಧ್ಯಕ್ಷರಾದ ರಾಮಚಂದ್ರ ಹೊಸಬೆಟ್ಟು, ಸಂಸ್ಥಾಪಕ ರಾಜ್ಯ ಗೌರವ ಸಲಹೆಗಾರರು ಬಾಲಚಂದ್ರ ಶೆಟ್ಟಿ ಸೋಮೇಶ್ವರ, ಸಂಸ್ಥಾಪಕರು ರಾಜ್ಯಾಧ್ಯಕ್ಷರು ಮನೋಜ್ ಕುಲಾಲ್ ಕೊಡಕ್ಕಲ್, ಸಂಸ್ಥಾಪಕರು ರಾಜ್ಯ ಪ್ರಧಾನ ಕಾರ್ಯದರ್ಶಿ ವಂಶಿ ಪಂಡಿತ್ ಕಣ್ಣೂರು, ಸಂಸ್ಥಾಪಕರು ರಾಜ್ಯ ಉಪಾಧ್ಯಕ್ಷರು ಪುಷ್ಪರಾಜ್ ರಾವ್, ಸಂಸ್ಥಾಪಕರು ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷರು ಚಂದ್ರೇಶ್ ಮಾನ್ಯ, ಸಂಸ್ಥಾಪಕರು ರಾಜ್ಯ ಕೋಶಾಧಿಕಾರಿ ಸಚಿನ್ ಜಿ ಮಣೇಲ್ಬೈಲ್, ಮಹಾಪೋಷಕರಾದ ಪ್ರವೀಣ್ ಜಿ ಮಣೆಲ್ ಬೈಲ್, ರಾಜ್ಯ ಸಮಿತಿಯ ಸದಸ್ಯರಾದ ಶ್ರೀಕುಮಾರ್, ಶರಣ್ ಜಿ ಮಣೇಲ್ಬೈಲ್,ಸದಸ್ಯರಾದ ನಿತಿನ್ ಜಿ ಮಣೇಲ್ಬೈಲ್, ಗಣೇಶ್ ಉಳ್ಳಾಲ, ಆದರ್ಶ್ ಬೊಳಂತೂರು, ಕಲಾ ಚಾವಡಿ ಘಟಕದ ಸಲಹೆಗಾರರಾದ ಕೇಶವ ದಾಸ್ ಆಚಾರ್ಯ, ಸದಸ್ಯರಾದ ಮನೋಜ್ ಭಂಡಾರಿ ಉರ್ವ, ನರೇಂದ್ರ ಅಂಚನ್, ಮಹಿಳಾ ಘಟಕದ ಸದಸ್ಯರಾದ ರಾಜೇಶ್ವರಿ ಬಲ್ಯಾಯ, ಅಮಿತಾ ಎನ್ ಶೆಟ್ಟಿ, ಶ್ರುತಿ ರೈ, ಬಬಿತ ಸುನಿಲ್ ಕೆಂಬಾರ್, ಪೂರ್ಣಿಮಾ ಮುಂತಾದವರು ಉಪಸ್ಥಿತರಿದ್ದರು.
ಟೀಮ್ ಮಂಜುಶ್ರೀ ತುಳುನಾಡ್(ರಿ.) ಸಂಸ್ಥೆಯ ಬಡವು ಯೋಜನೆಯ 43 ಮತ್ತು 44ನೇ ಸೇವೆ ಹಾಗೂ 16ನೇ ವಿಶೇಷ ಸೇವೆ
September 23, 2022
0
Tags






