ಬಳಿಕ ಮಹಾಪೂಜೆ, ವಿವಿಧ ಸ್ಪರ್ಧೆಗಳು, ರಾತ್ರಿ ಪೂಜೆ, ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ರಸಮಂಜರಿ ಕಾರ್ಯಕ್ರಮ ನಡೆಯಿತು. ಇಂದು ಅಪರಾಹ್ನ ಮಹಾಪೂಜೆ, ಸಂಜೆ ದುರ್ಗಾ ನಮಸ್ಕಾರ ಪೂಜೆ, ವಿಶೇಷ ದೀಪಾರಾಧನೆ ಸೇವೆ, ಪೂಜೆ, ಅನ್ನ ಸಂತರ್ಪಣೆ ನಡೆಯಲಿದೆ. ನಾಳೆ ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಮಧ್ಯಾಹ್ನದ ಬಳಿಕ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು, ರಾತ್ರಿ ಪೂಜೆ, ಅನ್ನಸಂತರ್ಪಣೆ, 9ಕ್ಕೆ ಸ್ಥಳೀಯ ಕಲಾವಿದರಿಂದ ನೃತ್ಯ ಹಾಗೂ ಕಿರು ನಾಟಕ ಪ್ರದರ್ಶನಗೊಳ್ಳಲಿದೆ. 5ರಂದು ಮಧ್ಯಾಹ್ನ 12.30ಕ್ಕೆ ಮಹಾಪೂಜೆ, 2ರಿಂದ ವಿಸರ್ಜನಾ ಪೂಜೆ, ಬಳಿಕ ವಿವಿಧ ಸ್ಪರ್ಧೆಗಳು, ಸಂಜೆ 5.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಮಂಜೇಶ್ವರ ಶ್ರೀಮತ್ ಅನಂತೇಶ್ವರ ದೇವಸ್ಥಾನದ ಉಪಾಧ್ಯಕ್ಷರಾದ ಛತ್ರಪತಿ ಪ್ರಭು ಅಧ್ಯಕ್ಷತೆ ವಹಿಸುವರು. ಬೈಕ್ ರೈಡಿಂಗ್ ಸಾಹಸಿ ಅಮೃತಾ ಜೋಷಿ ಕುಂಬಳೆ ಮುಖ್ಯ ಅತಿಥಿಯಾಗಿರುವರು. ಮಂಜೇಶ್ವರ ಠಾಣಾಧಿಕಾರಿ ಸಂತೋಷ್ ಕುಮಾರ್ ಎ. ಬಹುಮಾನ ವಿತರಿಸುವ. ಈಶ್ವರ ಕಿದೂರು ಧಾರ್ಮಿಕ ಉಪನ್ಯಾಸ ನೀಡುವರು.
