ಮಂಜೇಶ್ವರ : 65ನೇ ವರ್ಷದ ಸಾರ್ವಜನಿಕ ಶ್ರೀ ಶಾರದ ಮಹೋತ್ಸವದಂಗವಾಗಿ ಮಂಜೇಶ್ವರ ಸಬ್ ರಿಜಿಸ್ಟ್ರಿ ಕಚೇರಿ ಮುಂಭಾಗದಲ್ಲಿ ಈ ತಿಂಗಳ 5ರಂದು ರಾತ್ರಿ 7ಕ್ಕೆ ದಸರಾ ಕಾರ್ಯಕ್ರಮ ಜರಗಲಿದೆ. ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್, ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್, ಮಂಜೇಶ್ವರ ಪೊಲೀಸ್ ಠಾಣಾಧಿಕಾರಿ ಸಂತೋಷ್, ಉಳ್ಳಾಲ ಪೊಲೀಸ್ ಠಾಣಾಧಿಕಾರಿ ಸಂದೀಪ್, ಕನ್ನಡ ಚಲನಚಿತ್ರ ನಟ ಪ್ರೇಮ್ ದಂಪತಿ, ಮೇಘನಾ ಗಾವಂಕರ್, ಪತ್ರಕರ್ತ ಜಯಪ್ರಕಾಶ್ ಶೆಟ್ಟಿ ಉಪ್ಪಳ, ನಟಿ ಮೇಘಾ ಶೆಟ್ಟಿ, ಚಿತ್ರ ನಟಿ ನಿಧಿ ಸುಬ್ಬಯ್ಯ, ನಯನ, ನಿರೂಪಕ ಶೇಷಕೃಷ್ಣ ಭಟ್ ಮೊದಲಾದವರು ಭಾಗವಹಿಸುವರು. ಕಾರ್ಯಕ್ರಮದ ಆಯೋಜಕರಾದ ರಘು ಭಟ್ ಮಂಜೇಶ್ವರ ಲಕ್ಷ್ಮಣ್ ಭಕ್ತ ಮಂಜೇಶ್ವರ ಉಪಸ್ಥಿತರಿರುವರು.

