ಕಾಸರಗೋಡು : ಕುಂಬಳೆ ಸಮೀಪದ ಪ್ರಸಿದ್ಧ ಅನಂತಪುರ ದೇವಸ್ಥಾನದ ಸರೋವರದಲ್ಲಿ ಕಳೆದ ಸುಮಾರು 70 ವರ್ಷಗಳಿಂದ ನೆಲೆಸಿದ್ದ ಬಬಿಯಾ ಮೊಸಳೆ ಮೃತಪಟ್ಟಿದೆ.
ಅನಂತಪುರ ದೇವಸ್ಥಾನ ಕಾಸರಗೋಡು ಜಿಲ್ಲೆಯ ಕುಂಬಳೆ ಬಳಿ ಇರುವ ಪ್ರಸಿದ್ದ ದೇವಸ್ಥಾನವಾಗಿದೆ. ಸರೋವರದ ಮಧ್ಯೆ ಈ ದೇವಸ್ಥಾನ ಇದೆ.
ಮಧ್ಯಾಹ್ನ ಪೂಜೆಯ ವೇಳೆಗೆ ತಪ್ಪದೇ ಹಾಜರಾಗುತ್ತಿದ್ದ ಬಬಿಯಾ ಮೊಸಳೆಗೆ ದೇವರ ನೈವೇದ್ಯ ನೀಡಲಾಗುತ್ತಿತ್ತು. ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಬಬಿಯಾ ಕಾಣಿಸಿಕೊಳ್ಳುತ್ತಿತ್ತು.
