ಪುತ್ತೂರು : ಇದೇ ಬರುವ ದಿನಾಂಕ 27.11.2022ರಂದು ಭಾನುವಾರ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಅತೀ ವಿಜ್ರಂಭಣೆಯಿಂದ ಜರುಗುವ ಶ್ರೀ ಗೆಜ್ಜೆಗಿರಿ ನೂತನ ಮೇಳದ ಉದ್ಘಾಟನೆ ಹಾಗೂ ಪ್ರಥಮ ದೇವರ ಸೇವೆ ಆಟದ ಆಮಂತ್ರಣ ಪತ್ರಿಕೆಯನ್ನು ಗೆಜ್ಜೆಗಿರಿ ಕ್ಷೇತ್ರದ ಶಕ್ತಿ ಸಾನಿಧ್ಯದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಬಿಡುಗಡೆಗೊಳಿಸಲಾಯಿತು.ಆಮಂತ್ರಣ ಬಿಡುಗಡೆ ಸಮಾರಂಭದ ದೀಪ ಪ್ರಜ್ವಲಣೆಯನ್ನು ಶ್ರೀ ಸತೀಶ್ ಕುಮಾರ್ ಬಜಾಲ್ ಅವರು ನೆರವೇರಿಸಿದರು. ಆಮಂತ್ರಣ ಪತ್ರಿಕೆಯನ್ನು ಶ್ರೀ ಕೆ. ಚಿತ್ತರಂಜನ್ ಮತ್ತು ಅವರ ಧರ್ಮ ಪತ್ನಿ ಸುಲೋಚನರವರು ಬಿಡುಗಡೆ ಗೊಳಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀ ಪೀತಾಂಬರ ಹೆರಾಜೆ, ಗೌರವಾಧ್ಯಕ್ಷರಾದ ಜಯಂತ ನಡುಬೈಲ್, ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಕೋಶಾಧಿಕಾರಿ ದೀಪಕ್ ಕೋಟ್ಯಾನ್ ಗುರುಪುರ, ಕ್ಷೇತ್ರದ ಶ್ರೀಧರ ಪೂಜಾರಿ, ಶ್ರೀ ಗೆಜ್ಜೆಗಿರಿ ಯಕ್ಷಗಾನ ಮಂಡಳಿಯ ಸಂಚಾಲಕರಾದ ನವೀನ್ ಸುವರ್ಣ ಸಜೀಪ, ಶ್ರೀ ನವೀನ್ ಅಮೀನ್ ಶಂಕರಪುರ, ಮೇಳದ ನಿತಿನ್ ತೆಂಕ ಕಾರಂದೂರು,ಕಲಾವಿದರಾದ ಶಶಿಕಿರಣ್ ಕಾವು, ಚಂದ್ರಶೇಖರ ಸುಳ್ಯ ಪದವು, ನಾರಾಯಣ ಸುವರ್ಣ, ದಾಮೋದರ ಪಾಟಾಳಿ ಶರವು ಪ್ರಮುಖರಾದ ಡಾ. ರಾಜಾರಾಮ್ ಕೆ.ಬಿ, ಜನಾರ್ದನ ಪಡುಮಲೆ, ಪ್ರಕಾಶ್ ನಾರವಿ ಡೊಂಕಬೆಟ್ಟು, ವಿಶ್ವನಾಥ್ ಪೂಜಾರಿ ಮೂಲೆಮನೆ, ಸತೀಶ್ ಪೂಜಾರಿ, ನಾರಾಯಣ ಮಚ್ಚಿನ, ನೀಲಯ್ಯ ಪೂಜಾರಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ಧರು.
ಶ್ರೀ ಗೆಜ್ಜೆಗಿರಿ ನೂತನ ಮೇಳದ ಉದ್ಘಾಟನೆ ಹಾಗೂ ಪ್ರಥಮ ದೇವರ ಸೇವೆಯಾಟದ ಆಮಂತ್ರಣ ಪತ್ರಿಕೆ ಬಿಡುಗಡೆ
November 03, 2022
0
Tags



