ಬಾಯಾರು ನಿವಾಸಿ ಅಡ್ಯನಡ್ಕ ಪಿಯು ಕಾಲೇಜಿನ ವಿದ್ಯಾರ್ಥಿ ಬಳ್ಳೂರಿನಲ್ಲಿ ಬೈಕ್ ನಿಲ್ಲಿಸಿ ನಾಪತ್ತೆ
June 26, 2023
0
ಪೆರ್ಲ: ಬಾಯಾರು ಅನಂತಗಿರಿಯ ಗೋಪಾಲ ನಾಯಕ್ ಎಂಬವರ ಪುತ್ರ ಅಡ್ಯನಡ್ಕ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಅಂಕಿತ್ ನಾಯಕ್ ರವಿವಾರ ಸಂಜೆಯಿಂದ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಸಂಜೆ ನೆರೆ ಮನೆಗೆ ಹೋಗಿ ಬರುತ್ತೇನೆಂದು ತಂದೆಯವರ ಹೊಂಡಾ ಅಕ್ವಿವಾ ಗಾಡಿಯನ್ನು ತೆಗೆದುಕೊಂಡು ಹೋದವ ಬಳಿಕ ಬಾರದಿರುವುದನ್ನು ಗಮನಿಸಿದ ಮನೆಯವರು ಸಂಜೆ 6 ಗಂಟೆಯಿಂದ ಹುಡುಕಾಟ ನಡೆಸಿದ್ದರು. ಈ ನಡುವೆ ಬೈಕನ್ನು ಬಳ್ಳೂರು ಬಸ್ಟೆಂಡ್ ಪರಿಸರದಲ್ಲಿ ಉಪೇಕ್ಷಿಸಿ ಅಲ್ಲಿಂದ ಖಾಸಗಿ ಬಸ್ಸಿನಲ್ಲಿ ಕುದ್ದುಪದವು ಕಡೆಗೆ ತೆರಳಿರುವುದಾಗಿ ಮನೆಯವರಿಗೆ ಮಾಹಿತಿ ಲಭಿಸಿದೆ. ಈ ಬಗ್ಗೆ ಮಂಜೇಶ್ವರ ಪೋಲಿಸ್ ಠಾಣೆಗೆ ದೂರು ನೀಡಲಾಗಿದ್ದು ವಿದ್ಯಾರ್ಥಿ ವಿಟ್ಲ ಭಾಗಕ್ಕೆ ತೆರಳಿರುವ ಹಿನ್ನಲೆಯಲ್ಲಿ ಕರ್ನಾಟಕ ಪೋಲಿಸರಿಗೂ ತನಿಖೆಗೆ ಮನವಿ ಮಾಡಲಾಗಿದೆ. ಈ ನಡುವೆ ಯಾರದರೂ ಕಂಡವರಿದ್ದರೆ ತಕ್ಷಣ 7829764213,8086247293 ನಂಬ್ರಕ್ಕೆ ಕರೆ ಮಾಡಿ ಮಾಹಿತಿ ನೀಡಲು ಮನವಿ ಮಾಡಲಾಗಿದೆ.

