ಮಂಜೇಶ್ವರ : ಜೈ ಶ್ರೀರಾಮ್ ಸಮಾಜ ಸೇವಾ ಸಂಸ್ಥೆ ಮಂಜೇಶ್ವರ ಇದರ 7ನೇ ವಾರ್ಷಿಕೋತ್ಸವವು ಹೊಸಂಗಡಿಯಲ್ಲಿರುವ ಪ್ರೇರಣಾ ಸಭಾಂಗಣದಲ್ಲಿ ಸರಳವಾಗಿ ಮಾದರಿ ಕಾರ್ಯಕ್ರಮವಾಗಿ ನೆರವೇರಿತು. ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಸಂಸ್ಥೆಯ ಸದಸ್ಯೆಯರಾದ ಶ್ರೀಮತಿ ಆಶಾ ಲೋಕೇಶ್ ಮಾಡ ಹಾಗೂ ಶ್ರೀ ಮತಿ ಸರಸ್ವತಿ ಉದ್ಯಾವರ ಪ್ರಾರ್ಥನೆ ಹಾಡಿದರು. ಕಾರ್ಯಕ್ರಮವನ್ನು ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಶ್ರೀ ನಿತ್ಯಾನಂದ ಯೋಗಾಶ್ರಮ - ಕೊಂಡೆವೂರು ಇವರು ದೀಪ ಬೆಳಗಿಸಿ ಉದ್ಘಾಟಿಸಿ, ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ನಾರಾಯಣ ಭಗವತಿ ಪೂಜಾರಿ ಮಾತಾಡಿದರು.ಅತಿಥಿಗಳಾಗಿ ಶ್ರೀ ಮೋಹನ್ ಶೆಟ್ಟಿ ತೂಮಿನಾಡು, ಶ್ರೀ ಬಾಲಕೃಷ್ಣ ಕುಂಜತ್ತೂರು, ಶ್ರೀ ರಘು ಕಾರ್ನವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಗೌರವ ಸಲಹೆಗಾರರಾದ ಶ್ರೀ ನ್ಯಾ.ನವೀನ್ ರಾಜ್ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಗಿರೀಶ್ ಮುನ್ನಿಪ್ಪಾಡಿ ಮಾತನಾಡಿದರು. ಸಂಸ್ಥೆಯ ಕೋಶಾಧಿಕಾರಿಯಾದ ಶ್ರೀ ಪ್ರಶಾಂತ್ ಆಚಾರ್ಯ, ಲೆಕ್ಕಪತ್ರ ಹಾಗೂ ಗತ ವರ್ಷದ ವರದಿ ವಾಚಿಸಿದರು. ನಂತರ ಅತಿಥಿಗಳಿಗೆ ಸ್ಮರಣಿಕೆ ನೀಡಲಾಯಿತು. ಅರ್ಹ ಫಲಾನುಭವಿಗಳಿಗೆ ದಿನಸಿ ಸಾಮಾಗ್ರಿಗಳ ಕಿಟ್ ವಿತರಣೆ ಮಾಡಲಾಯಿತು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸನತ್ ಮಯ್ಯ ಸ್ವಾಗತಿಸಿ, ಸಂಸ್ಥೆಯ ಸದಸ್ಯರಾದ ಶ್ರೀಮತಿ ಸುಜಾತಾ ಮಂಜೇಶ್ವರ ವಂದಿಸಿದರು. ಕಿರಣ್ ಸುಂಕದಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
ಜೈ ಶ್ರೀರಾಮ್ ಸಮಾಜ ಸೇವಾ ಸಂಸ್ಥೆ ಮಂಜೇಶ್ವರ | 7ನೇ ವಾರ್ಷಿಕೋತ್ಸವ - ದಿನಸಿ ಕಿಟ್ ವಿತರಣೆ
June 13, 2023
0
Tags


