ಕಲ್ಲಡ್ಕ : ಪ್ರತಿಭಾವಂತ ವಿದ್ಯಾರ್ಥಿನಿ..ತನ್ನ ಭಾಷಣಗಳ ಮೂಲಕ ರಾಷ್ಟೀಯವಾದದ ಚಿಂತನೆಗಳನ್ನು ಸಮಾಜಕ್ಕೆ ಬಿತ್ತುತ್ತಿದ್ದ ಸಹೋದರಿ ಶ್ರೀದೇವಿ ಪುತ್ತೂರುರವರು ತೀವ್ರ ರಸ್ತೆ ಅಪಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದು ಸುಮಾರು 15 ಲಕ್ಷ ರೂ ಚಿಕಿತ್ಸಾವೆಚ್ಚದ ಅವಶ್ಯಕತೆಗಾಗಿ ಕುಟುಂಬ ಸದಸ್ಯರು ಸಹೃದಯಿ ಸಮಾಜದ ನೆರವನ್ನು ಬಯಸಿದ್ದರು..
ಆ ಪ್ರಯುಕ್ತ ತಕ್ಷಣ ಕಾರ್ಯಪ್ರವೃತ್ತವಾದ ಸಾಮಾಜಿಕ ಸೇವಾ ಸಂಸ್ಥೆ ಯುವಶಕ್ತಿ ಸೇವಾಪಥ ಶ್ರೀದೇವಿ ಪುತ್ತೂರು ಆರೋಗ್ಯ ನಿಧಿ ಯೋಜನೆಯನ್ನು ಕೈಗೆತ್ತಿಕೊಂಡು ಕೇವಲ 24 ಗಂಟೆಗಳಲ್ಲಿ ಸಮಾಜದ ದಾನಿಗಳಿಂದ ಸಾಮಾಜಿಕ ಜಾಲತಾಣದ ಮೂಲಕ ರೂ 4,34,950 (ನಾಲ್ಕು ಲಕ್ಷ ಮೂವತ್ತನಾಲ್ಕು ಸಾವಿರದ ಒಂಬೈನೂರ ಐವತ್ತು)ಸಂಗ್ರಹಿಸಿ ಶ್ರೀದೇವಿಯ ಹೆತ್ತವರಲ್ಲಿ ಹಸ್ತಾಂತರಿಸಿದೆ.
ಕಳೆದ ಪೆಬ್ರವರಿಯಲ್ಲಿ ನಡೆದ ಯುವಶಕ್ತಿ ಸೇವಾಪಥ ದ ಪ್ರಥಮ ವಾರ್ಷಿಕ ಸಂಭ್ರಮದ ಪ್ರಮುಖ ಭಾಷಣಗಾರ್ತಿಯಾಗಿ ಶ್ರೀದೇವಿ ಪುತ್ತೂರು ಭಾಗವಹಿಸಿದ್ದರು.
ಅಲ್ಪಾವಧಿಯಲ್ಲಿ ದೊಡ್ಡ ಮನಸ್ಸಿನಲ್ಲಿ ಸಹಕರಿಸಿದ ಸೇವಾಬಂಧುಗಳಿಗೆ ಯುವಶಕ್ತಿ ಸೇವಾಪಥ ವಂದನೆಗಳನ್ನು ಸಮರ್ಪಿಸಿದೆ.


