ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಇಂಜಿನಿಯರಿಂಗ್ ಪದವೀಧರರು ಎಂಬಿಎ ಮಾಡುತ್ತಾರೆ. ಇಂಜಿನಿಯರಿಂಗ್ ನಂತರ ಎಂಬಿಎ ಮಾಡಿದವರಿಗೆ ಉದ್ಯೋಗರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ಬಿಇ/ಬಿ ಟೆಕ್ ಜೊತೆ ಎಂಬಿಎ ಮಾಡಿದವರ ಕೆರಿಯರ್ ಉತ್ತಮವಾಗಿರುತ್ತದೆ ಎನ್ನಲಾಗುತ್ತದೆ. ಹಾಗಾದರೆ ಇಂಜಿನಿಯರಿಂಗ್ ಬಳಿಕ MBA ಮಾಡಿದ್ರೆ ಇರುವ 9 ಲಾಭಗಳ ಬಗ್ಗೆ ಇಲ್ಲಿ ತಿಳಿಯೋಣ.
1) ವೃತ್ತಿ ಬೆಳವಣಿಗೆ: ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದ ನಂತರ ಎಂಬಿಎ ಮಾಡುವುದರಿಂದ ಕೆಲಸ ಮಾಡಲು ಹಲವು ಆಯ್ಕೆಗಳಿರುತ್ತವೆ. ಎಂಜಿನಿಯರಿಂಗ್ ನಿಂದ ತಾಂತ್ರಿಕ ಜ್ಞಾನವನ್ನು ಎಂಬಿಎನಿಂದ ನಿರ್ವಹಣೆ ಕೌಶಲ್ಯಗಳನ್ನು ಕಲಿಯಬಹುದು. ಈ ಎರಡೂ ರೀತಿಯ ಸ್ಕಿಲ್ಸ್ ಇದ್ದರೆ ಕೆರಿಯರ್ ಚೆನ್ನಾಗಿರುತ್ತೆ.
2) ಮ್ಯಾನೇಜ್ ಮೆಂಟ್ ಸ್ಕಿಲ್ಸ್: ಯಾವುದೇ ಕ್ಷೇತ್ರದಲ್ಲಿ ನಿರ್ವಹಣಾ ಕೌಶಲ್ಯಗಳು ಬಹಳ ಮುಖ್ಯ. ಯಾವುದೇ ಕಾರ್ಪೊರೇಟ್ ನಲ್ಲಿ ಕೆಲಸ ಮಾಡುವಾಗ ನಿರ್ಧಾರ ತೆಗೆದುಕೊಳ್ಳಲು ಮತ್ತು ಸಮಸ್ಯೆ ಪರಿಹಾರಕ್ಕೆ ಈ ವಿಷಯಗಳು ಅವಶ್ಯಕ.
3) MBAಗೆ ವಿಶ್ವ ಮಟ್ಟದಲ್ಲಿ ಮಾನ್ಯತೆ ಇದೆ: ಎಂಬಿಎ ಪದವಿ ಪ್ರಪಂಚದಾದ್ಯಂತ ಗುರುತಿಸಲ್ಪಟ್ಟಿದೆ. ಇಂಜಿನಿಯರಿಂಗ್ ನಂತರ ಎಂಬಿಎ ಮಾಡುವ ಪ್ರಮುಖ ಪ್ರಯೋಜನವೆಂದರೆ ಭಾರತದ ಹೊರಗೆ ಉದ್ಯೋಗಾವಕಾಶಗಳನ್ನು ಪಡೆಯಬಹುದು. ಇಂಜಿನಿಯರಿಂಗ್ ನಂತರ ಎಂಬಿಎ ಮಾಡಿ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉನ್ನತ ಹುದ್ದೆಗೆ ತಲುಪಿದವರು ಅನೇಕರಿದ್ದಾರೆ.
4) ಮ್ಯಾನೇಜ್ ಮೆಂಟ್ ಕೆಲಸ ಪಡೆಯಬಹುದು: MBA ವೃತ್ತಿಪರರು ಕಾರ್ಪೊರೇಟ್ ಬಗ್ಗೆ ಉತ್ತಮ ತಿಳುವಳಿಕೆಯನ್ನು ಹೊಂದಿರುತ್ತಾರೆ. ಎಂಬಿಎ ನಂತರ ಎಂಜಿನಿಯರಿಂಗ್ ಪದವಿ ಪಡೆದವರು ಮ್ಯಾನೇಜ್ಮೆಂಟ್ ಕೆಲಸವನ್ನು ಪಡೆಯುವ ಸಾಧ್ಯತೆಗಳು ಇತರರಿಗಿಂತ ಹೆಚ್ಚು.
5) ಉದ್ಯಮಿಯಾಗಬಹುದು: ಇಂಜಿನಿಯರಿಂಗ್ ನಂತರ ಎಂಬಿಎ ಮಾಡುವ ಮೂಲಕ ಉದ್ಯಮಶೀಲತೆಯ ಬಾಗಿಲುಗಳೂ ತೆರೆದುಕೊಳ್ಳುತ್ತವೆ. MBA ಪದವಿ ಹೊಂದಿರುವ ವ್ಯಕ್ತಿಗೆ ಉದ್ಯಮಿ ಆಗಲು ಅಗತ್ಯವಿರುವ ಎಲ್ಲಾ ಅಂಶಗಳ ಬಗ್ಗೆ ತಿಳಿದಿರುತ್ತದೆ.
6) CEO ಆಗಬಹುದು: ಇಂಜಿನಿಯರಿಂಗ್ ನಂತರ ಎಂಬಿಎ ಮಾಡುವುದರಿಂದ ಕಾರ್ಪೊರೇಟ್ ವಲಯದಲ್ಲಿ ಲೀಡರ್ ಆಗಲು ಹೆಚ್ಚಿನ ಅವಕಾಶಗಳು ಸಿಗುತ್ತವೆ. ಕಾರ್ಪೊರೇಟ್ ನಲ್ಲಿ ಮ್ಯಾನೇಜರ್ ಮತ್ತು CEO ಆಗುವ ಮೂಲಕ ತಂಡವನ್ನು ಮುನ್ನಡೆಸಬಹುದು.
7) ಅಧ್ಯಯನ ಆಯ್ಕೆ: ಇಂಜಿನಿಯರಿಂಗ್ ನಂತರ ಎಂಬಿಎ ಕೋರ್ಸ್ ಮಾಡುವುದರಿಂದ ಅನುಕೂಲವೂ ಇದೆ, ಅದನ್ನು ಅತ್ಯಂತ ಫ್ಲೆಕ್ಸಿಬಲ್ ಆಗಿ ಮುಗಿಸಬಹುದು. ಎಂಬಿಎ ಅನ್ನು ಪಾರ್ಟ್ ಟೈಮ್ ಆಗಿಯೂ ಮಾಡಬಹುದು.
8) ವಯಸ್ಸಿನ ಮಿತಿ ಇಲ್ಲ: ಇಂಜಿನಿಯರಿಂಗ್ ನಂತರ ಎಂಬಿಎ ಯಾವಾಗ ಬೇಕಾದರೂ ಮಾಡಬಹುದು. ಇದಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಇಂಜಿನಿಯರಿಂಗ್ ಪದವಿಯ ನಂತರ ನೀವು ಉದ್ಯೋಗವನ್ನು ಮಾಡಬಹುದು. ಮಧ್ಯೆ ಬಿಡುವು ಮಾಡಿಕೊಂಡು ಎಂಬಿಎ ಮಾಡಬಹುದು.
9) ಪರ್ಸನಾಲಿಟಿ ಡೆವಲೆಪ್ ಮೆಂಟ್: ಎಂಬಿಎ ಕೋರ್ಸ್ ಅವಧಿಯಲ್ಲಿ ವ್ಯಕ್ತಿತ್ವ ವಿಕಸನವೂ ನಡೆಯುತ್ತದೆ. ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳು, ನಿರ್ವಹಣಾ ಕೌಶಲ್ಯಗಳು, ಸಂವಹನ ಕೌಶಲ್ಯಗಳು ಭವಿಷ್ಯದ ವೃತ್ತಿಜೀವನಕ್ಕೆ ಬೇಕಾಗುತ್ತದೆ.
ಲೇಖನ - ಅಂತರ್ಜಾಲ

