ಮಂಜೇಶ್ವರ: ಯಶಸ್ವಿ ಕಲಾವಿದರು ಮಂಜೇಶ್ವರ ತಂಡದ ಈ ಬಾರಿಯ ನೂತನ ಭಕ್ತಿ ಪ್ರಧಾನ ಸಾಮಾಜಿಕ ನಾಟಕ "ಅಬ್ಬರ" ದ ಮೂಹೂರ್ತ ಕಾರ್ಯಕ್ರಮ ಮಂಜೇಶ್ವರ ಹೊಸಬೆಟ್ಟು ಜಮ್ಮದ ಮನೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇಂದು ಬೆಳಗ್ಗೆ ನಡೆಯಿತು.
ಕ್ಷೇತ್ರದ ಪ್ರಧಾನ ಅರ್ಚಕರಾದ ರಾಮಚಂದ್ರ ಐತಾಳ್ರವರು ತಾಯಿ ದುರ್ಗಾಪರಮೇಶ್ವರೀ ಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿ ನೂತನ ನಾಟಕದ ಕೃತಿಯನ್ನು ಸಂಸ್ಥೆಯ ಗೌರವ ಮಾರ್ಗದರ್ಶಕರಾದ ಶ್ರೀ ರಾಜ ಬೆಳ್ಚಪ್ಪಾಡರವರ ದಿವ್ಯ ಉಪಸ್ಥಿತಿಯಲ್ಲಿ ನಾಟಕದ ನಿರ್ದೇಶಕ ರವಿ ಎಂ.ಎಸ್ ವರ್ಕಾಡಿ ಹಾಗೂ ತಂಡದ ಸಾರಥಿ ಜೀವನ್ ಮಂಜೇಶ್ವರರವರಿಗೆ ಹಸ್ತಾಂತರಿಸಿ, ಶುಭ ಹಾರೈಸಿದರು.ಈ ವೇಳೆ ತಂಡದ ಕಲಾವಿದರಾದ ಚಿತ್ರನಟ ರಾಧಾಕೃಷ್ಣ ಆಚಾರ್ಯ ಕುಂಬಳೆ, ದೇವದಾಸ್ ಮಂಗಲ್ಪಾಡಿ, ಪುಷ್ಪರಾಜ್ ಕುಳೂರು, ಲಿಖಿನ್ ಮರೋಳಿ, ಪ್ರಸಾದ್ ಶೆಟ್ಟಿ ಶಕ್ತಿ ನಗರ, ದಯಾನಂದ ಮಾಡ, ಕಾರ್ತಿಕ್ ಲಾಲ್ ಬಾಗ್, ರಶ್ಮಿತಾ ಉಜಿರೆ, ಸುಶ್ಮಿತಾ ಮುಡಿಪು, ಸಚಿನ್ ಕುಂಪಲ, ನಾಗಾರ್ಜುನ ಮಂಗಲ್ಪಾಡಿ, ತಂಡದ ಸಲಹೆಗಾರರಾದ ರಾಜೇಶ್ ಅಣ್ಣಪ್ಪರ ಹಿತ್ಲು, ಸುಶಾನ್ ಶೆಟ್ಟಿ ಉಪ್ಪಿನಂಗಡಿ, ಕ್ಷೇತ್ರದ ಪಾಧಾಧಿಕಾರಿ ಬಾಲಕೃಷ್ಣ ಶೆಟ್ಟಿ ಹೊಸಬೆಟ್ಟು, ಶ್ರೀಮತಿ ಆಶಾ ಶೆಟ್ಟಿ ಕುಂಜತ್ತೂರು, ಕಲಾಂಜಲಿ ಮಂಜೇಶ್ವರದ ಸಂಸ್ಥಾಪಕ ಜಗದೀಶ್ ಮಡಿವಾಳ್, ಮನೋಜ್ ಚೌಕಿ, ಕಾರ್ತಿಕ್ ಆಚಾರ್ಯ ಕಾಳಿಕಾಂಬ ಮೊದಲಾದವರು ಉಪಸ್ಥಿತರಿದ್ದರು.ಯಶಸ್ವಿ ಕಲಾವಿದರು ಮಂಜೇಶ್ವರ ತಂಡವು ಗಡಿನಾಡಿನಲ್ಲಿ ತನ್ನದೇ ಆದ ಕಲಾತ್ಮಕತೆಯ ದೃಶ್ಯ, ಸನ್ನಿವೇಶಗಳೊಂದಿಗೆ ಕಳೆದ 7 ವರ್ಷದಲ್ಲಿ 7 ಕೃತಿಯನ್ನು ರಂಗಭೂಮಿಯಲ್ಲಿ ಪ್ರದರ್ಶಿಸಿ, ಜನ ಮೆಚ್ಚುಗೆಗಳಿಸಿದ್ದು, ಈ ಬಾರಿ 8ನೇ ವರ್ಷದ ಹೊಸ್ತಿಲಲ್ಲಿ 8ನೇ ಕಲಾ ಕಾಣಿಕೆಯಾಗಿ ತುಳುನಾಡಿನ ದೈವಾರಾಧನೆಯ ವಿಷಯವನ್ನು ಆಧರಿಸಿ, ಕುಟುಂಬದಲ್ಲಿ ಹಾಗೂ ಸಮಾಜದಲ್ಲಿ ದೈವಗಳ ಆರಾಧನೆ ಹೇಗೆ ಎಂಬ ಸುಂದರ ಕಥಾನಕವನ್ನು ಮುಂದಿಟ್ಟುಕೊಂಡು "ಅಬ್ಬರ" ಎಂಬ ಭಕ್ತಿ ಪ್ರಧಾನವಾದ ಸಾಮಾಜಿಕ ನಾಟಕವನ್ನು ಪ್ರದರ್ಶಿಸಲು ನಿರ್ಧರಿಸಿದ್ದಾರೆ. ಪ್ರಕೃತಿ ಮಾತೆಯ ನೆಲೆವೀಡು ತುಳುನಾಡಿನ ದೈವ ದೇವರ, ಗುರು - ಹಿರಿಯರ ಅನುಗ್ರಹ ದೊಂದಿಗೆ, ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದ ಅಣ್ಣ ದೈವದ ಪಾತ್ರ ಶ್ರೀ ರಾಜ ಬೆಳ್ಚಪ್ಪಾಡರವರ ಮಾರ್ಗದರ್ಶನ ಹಾಗೂ ಶುಭಾಶೀವಾರ್ದದೊಂದಿಗೆ ನಿತಿನ್ ಹೊಸಂಗಡಿ ಕಥೆ ಬರೆದು, ಅರುಣ್ ಚಂದ್ರ ಬಿ.ಸಿ ರೋಡ್ ಸಂಭಾಷಣೆಯಲ್ಲಿ, ರವಿ ಎಂ.ಎಸ್ ವರ್ಕಾಡಿ ನಿರ್ದೇಶಿಸಿ, ನಾಗಾರ್ಜುನ ಮಂಗಲ್ಪಾಡಿ ಸಂಗೀತ ನೀಡಿ, ಸಚಿನ್ ಕುಂಪಲರ ಸಮಗ್ರ ನಿರ್ವಹಣೆಯೊಂದಿಗೆ, ಜೀವನ್ ಮಂಜೇಶ್ವರ ಸಾರಥ್ಯದಲ್ಲಿ "ಅಬ್ಬರ" ಎಂಬ ತುಳು ಭಯಾನಕ ಹಾಗೂ ಭಕ್ತಿ ಭಾವದ ಹಾಸ್ಯ ಸನ್ನಿವೇಶಗಳಿಂದ ಕೂಡಿದ ನಾಟಕವನ್ನು ಪ್ರದರ್ಶಿಸಲಿರುವರು. ಈಗಾಗಲೇ ನಾಟಕದ ಪೋಸ್ಟರ್ ನೋಡಿ, ದಕ್ಷಿಣ ಕನ್ನಡ, ಉಡುಪಿ ಹಾಗೂ ಮಲೆನಾಡು ಕೊಡಗಿನ ಕೆಲವು ಕಡೆಗಳಿಂದ ಕಾಲ್ ಕರೆ ಮಾಡಿ ನಾಟಕದ ಬಗ್ಗೆ ಚರ್ಚಿಸಿ, ವಿಷಯ ಕೇಳಿ ಬುಕ್ ಮಾಡುತ್ತಿದ್ದು, ಈಗಾಗಲೇ ಹಲವು ಕಡೆಗಳಲ್ಲಿ ಪ್ರದರ್ಶನ ನಡೆಸಲು ಸಂಘಟಕರು ಮುಂಗಡ ಮೊತ್ತ ನೀಡಿರುತ್ತಾರೆ ಎಂದು ತಂಡದ ಸಾರಥಿ ಜೀವನ್ ಮಂಜೇಶ್ವರ ಮಂಜುಶ್ರೀ ನ್ಯೂಸ್ಗೆ ತಿಳಿಸಿದ್ದಾರೆ.




