ಮಂಗಳೂರು: ಜು.22ರಂದು ರಾತ್ರಿ ಸುರಿದ ಧಾರಾಕಾರ ಮಳೆಗೆ ಬೃಹದಾಕಾರದ ಮರವೊಂದು ಬುಡ ಸಮೇತ ನೆಲಕ್ಕುರುಳಿದ ಘಟನೆ ಮಂಗಳೂರು ನಾರಾಯಣ ಗುರು ಸರ್ಕಲ್ ಬಳಿ ನಡೆದಿರುವ ಬಗ್ಗೆ ವರದಿಯಾಗಿದೆ.ಘಟನೆಯ ವೇಳೆ ಸ್ಕೂಟರ್ ಸವಾರರಿಬ್ಬರು ಆ ದಾರಿಯಾಗಿ ಹಾದು ಬರುತ್ತಿದ್ದು, ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಎಂದು ತಿಳಿದು ಬಂದಿದೆ. ಘಟನೆಯಲ್ಲಿ ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿರುವುದರಿಂದ ವಾಹನಗಳ ಓಡಾಟಕ್ಕೆ ತೊಡಕುಂಟಾಗಿದ್ದು, ಏಕಮುಖ ಸಂಚಾರ ರಸ್ತೆ ಬಂದ್ ಆಗಿದೆ ಎಂದು ತಿಳಿದು ಬಂದಿದೆ.
ಸುರಿದ ಧಾರಾಕಾರ ಮಳೆಗೆ ನಾರಾಯಣ ಗುರು ಸರ್ಕಲ್ ಬಳಿ ಬುಡ ಸಮೇತ ನೆಲಕ್ಕುರುಳಿದ ಬೃಹದಾಕಾರದ ಮರ
July 23, 2023
0
Tags


