ಬದಿಯಡ್ಕ : ಶಾಲಾ ವಿದ್ಯಾರ್ಥಿನಿ ಮರದ ಕೊಂಬೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಬದಿಯಡ್ಕ ನವಜೀವನ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಕನ್ಯಪ್ಪಾಡಿ ಸಮೀಪದ ಮಾಡತ್ತಡ್ಕ ಕೇರ ನಿವಾಸಿ ರಾಮಕೃಷ್ಣ ಮತ್ತು ಸುಜಾತ ದಂಪತಿಯ ಪುತ್ರಿ ರಸ್ಮಿತಾ (16) ಮೃತರು.
ಶಾಲಾ ರಜೆಯಲ್ಲಿ ಭಾನುವಾರ ಬೆಳಗ್ಗೆ ಎಂದಿನಂತೆ ಮನೆಯಿಂದ ಹೊರಗೆ ಹೋಗಿದ್ದಳು ಎನ್ನಲಾಗಿದ್ದು, ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಮನೆ ಸಮೀಪದ ಮರದ ಕೊಂಬೆಗೆ ನೇಣು ಬಿಗಿದುಕೊಂಡಿರುವುದು ಮನೆಯವರ ಗಮನಕ್ಕೆ ಬಂದಿದೆ. ಮೃತರು ತಾಯಿ, ಸಹೋದರ ಸಹೋದರಿಯರಾದ ಮಲ್ಲಿಕಾ, ರಂಜಿತ್, ರಂಜಿನಿ, ರಜಿತಾ ಮತ್ತು ರಾಜೇಶ್, ರಕ್ಷಿತ್, ಅಲ್ಲದೇ ಅನೇಕ ಬಂದು ಬಳಗವನ್ನು ಅಗಲಿದ್ದಾರೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ರವಾನಿಸಿದ್ದಾರೆ.

