ಮಣಿಪಾಲ : ಮಾಹೆ, ಎಂಸಿಎಚ್ಪಿಯ ಅಸಿಸ್ಟೆಂಟ್ ಪ್ರೊಫೆಸರ್ ಜ್ಯೋತಿ ಸಾಮಂತ್ ಇವರು ಮಂಡಿಸಿದ ''ಡಯಾಬಿಟೀಸ್ ಮೆಲಿಟಸ್ ಇನ್ ಪ್ರೆಗ್ನನ್ಸಿ: ಇನ್ಫ್ಲುಯೆನ್ಸ್ ಆನ್ ಫೀಟಲ್, ನಿಯೊನೆಟಲ್ ಆಂಡ್ ಇನ್ಫನ್ಟೈಲ್ ಕಾರ್ಡಿಯಾಕ್ ಸ್ಟ್ರಕ್ಚರ್ ಆಂಡ್ ಫಂಕ್ಷನ್'' ಎಂಬ ಮಹಾ ಪ್ರಬಂಧಕ್ಕೆ ಮಾಹೆ ಪಿಎಚ್.ಡಿ ಪದವಿ ನೀಡಿದೆ. ಕೆಎಂಸಿ ಮಣಿಪಾಲದ ಹೃದ್ರೋಗ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಪದ್ಮಕುಮಾರ್ ಅವರ ಮಾರ್ಗದರ್ಶನ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಅಖಿಲ ವಾಸುದೇವ ಮತ್ತು ಮಕ್ಕಳ ತಜ್ಞ ಡಾ. ಲೆಸ್ಲಿ ಎಡ್ವರ್ಡ್ ಲೂವಿಸ್ ಅವರು ಸಹಮಾರ್ಗ ದರ್ಶನ ನೀಡಿದ್ದರು.ಇವರು ಪರ್ಕಳ, ಶೆಟ್ಟಿ ಬೆಟ್ಟು ರಾಧಾಕೃಷ್ಣ ಸಾಮಂತ್ ಮತ್ತು ರತ್ನಾ ದಂಪತಿಯ ಪುತ್ರಿ. ಉದಯವಾಣಿ ಡಿಜಿಟಲ್ ವಿಭಾಗದ ಸೀನಿಯರ್ ಕಂಟೆಂಟ್ ಡೆವ್ ಲಪರ್ ವಿಷ್ಣುದಾಸ್ ಪಾಟೀಲ್ ಗೋರ್ಪಾಡಿ ಅವರ ಪತ್ನಿ.
ಇವರು ಬಾಂಧವ್ಯ ಫೌಂಡೇಶನ್ನ ಟ್ರಸ್ಟಿಯಾಗಿ ಸಾಮಾಜಿಕ ಚಟುವಟಿಕೆಯಲ್ಲಿ ಗುರುತಿಸಿಕೊಂಡವರು.

