ಸುಭಾಷ್ ಯುವಕ ಮಂಡಲ ರಿ. ಸಜೀಪ ಮೂಡ 77ನೇ ಸ್ವಾತಂತ್ರ್ಯೋತ್ಸವ ಆಚರಣೆ
August 15, 2023
0
ಸಜೀಪ : ಸುಭಾಷ್ ಯುವಕ ಮಂಡಲ ರಿ. ಸಜೀಪ ಮೂಡ ವತಿಯಿಂದ 77ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಸುಭಾಷ್ ಯುವಕ ಮಂಡಲದ ಅಧ್ಯಕ್ಷರಾದ ಎಸ್ ಶ್ರೀಕಾಂತ್ ಶೆಟ್ಟಿ ನೆರವೇರಿಸಿದರು. ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯಭಟ್ ಶುಭ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯನಿ ವತ್ಸಲ, ಈಶ್ವರ ಮಂಗಲ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ದೇವಿ ಪ್ರಸಾದ್ ಪೂಂಜ, ಶಾರದಾ ಪೂಜಾ ಸಮಿತಿ ಅಧ್ಯಕ್ಷರಾದ ವಸಂತ ಬರ್ಕೆ,ಪಂಚಾಯತ್ ಸದಸ್ಯ ಯೋಗೇಶ್ ಬೆಲ್ಚಾಡ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಗಿರೀಶ ಪೆರ್ವ, ಶಾಲಾ ಅಧ್ಯಾಪಕರು ವಿದ್ಯಾರ್ಥಿಗಳು ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಯುವಕ ಮಂಡಲದ ಸದಸ್ಯರು ಉಪಸ್ಥಿತರಿದ್ದರು.
Tags



