ತೊಕ್ಕೊಟ್ಟು : ಉಳ್ಳಾಲ ತಾಲೂಕಿನ ಹರೇಕಳ ಗ್ರಾಮದ ದೆಬ್ಬೇಲಿ ಎಂಬಲ್ಲಿ ಅದೇ ಊರಿನ ಅನ್ಯಕೋಮಿನ ವಿವಾಹಿತ ಯುವಕನೊಬ್ಬ ರಾತ್ರಿ ಹೊತ್ತಿನಲ್ಲಿ ಮನೆಯ ಯಜಮಾನ ಇಲ್ಲದ ಸಮಯ ನೋಡಿಕೊಂಡು ತಾಯಿ ಜೊತೆಗೆ ಇಬ್ಬರು ಹೆಣ್ಣು ಮಕ್ಕಳು ಮಾತ್ರ ಇರುವ ಸಮಯದಲ್ಲಿ ಮನೆಗೆ ನುಗ್ಗಿ ಮಂಚದ ಕೆಳಗೆ ಅವಿತು ಕುಳಿತುಕೊಂಡು, ತಾಯಿಯ ಕೈ ಕಾಲು ಮುಟ್ಟಿ ಲೈಂಗಿಕ ಕಿರುಕುಳಕ್ಕೆ ಪ್ರಯತ್ನ ಪಟ್ಟ ಘಟನೆ ಬುಧವಾರ ರಾತ್ರಿ ನಡೆದಿದೆ.
ನೌಫಲ್ ಎಂಬಾತನೆ ಮನೆಗೆ ನುಗ್ಗಿ ಲೈಂಗಿಕ ಕಿರುಕುಳಕ್ಕೆ ಪ್ರಯತ್ನಪಟ್ಟ ಕಾಮುಖ ಅಷ್ಟರಲ್ಲಾಗಲೇ ಎಚ್ಚರಗೊಂಡ ತಾಯಿ ಮಕ್ಕಳು ಭಯಭೀತರಾಗಿ ಕಿರುಚಾಡಿದ್ದಾರೆ. ಕಿರುಚಾಟಕ್ಕೆ ಎಚ್ಚರಗೊಂಡು ಪಕ್ಕದ ಮನೆಯವರು ಸಹಾಯಕ್ಕೆ ಧಾವಿಸಿದ್ದಾರೆ. ಅಷ್ಟರಲ್ಲಾಗಲೇ ಆರೋಪಿಯು ಓಡಿ ತಲೆಮರೆಸಿಕೊಂಡಿದ್ದಾನೆ. ಓಡುವ ರಭಸದಲ್ಲಿ ಆತನ ಮೊಬೈಲ್ ಫೋನ್ ಘಟನೆ ನಡೆದ ಮನೆಯಲ್ಲಿ ಬಿದ್ದಿದ್ದು, ಕಿರುಕುಳಕ್ಕೆ ಒಳಗಾದ ತಾಯಿಯ ದೂರಿನ ಅನ್ವಯ ಕೊಣಾಜೆ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಪರಿಶೀಲನೆಗೆ ಬಂದಾಗ ಮೊಬೈಲ್ ಫೋನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ. ವಿಚಾರಣೆಯ ವೇಳೆ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

.jpeg)